ಚಿಕನ್ Online Desk
ರಾಜ್ಯ

ಚಿಕನ್ ಪ್ರಿಯರಿಗೆ ಡಬಲ್ ಶಾಕ್; ಜನ್ಮಾಷ್ಟಮಿ, ಮುಷ್ಕರದ ಕಾರಣ ನಾಳೆ ಬೆಂಗಳೂರಿನಲ್ಲಿ ನಾನ್‌ವೆಜ್ ಸಿಗೋದು ಡೌಟ್!

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಶುಕ್ರವಾರ, ಬೆಂಗಳೂರಿನಾದ್ಯಂತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ನಾಳೆ, ಸೆಪ್ಟೆಂಬರ್ 4, 2026ರ ಶುಕ್ರವಾರ, ಬೆಂಗಳೂರಿನಾದ್ಯಂತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಧಾರ್ಮಿಕ ಹಬ್ಬದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕೃತ ಸುತ್ತೋಲೆ ಹೊರಡಿಸಿದ್ದು, ತನ್ನ ವ್ಯಾಪ್ತಿಯ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಕಸಾಯಿಖಾನೆಗಳು ಹಾಗೂ ಚಿಕನ್, ಮಟನ್ ಮತ್ತು ಮೀನು ಮಾರಾಟ ಮಾಡುವ ಎಲ್ಲಾ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ನಾಳೆ ರಾಜಧಾನಿಯಲ್ಲಿ ಸಿಗಲ್ಲ ಮಾಂಸ!

ಧಾರ್ಮಿಕ ಹಬ್ಬದ ಗೌರವಾರ್ಥವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಸುತ್ತೋಲೆಯಲ್ಲಿ, ತನ್ನ ವ್ಯಾಪ್ತಿಯಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.

  • ಕಸಾಯಿಖಾನೆಗಳು: ಎಲ್ಲಾ ಅಧಿಕೃತ ಮತ್ತು ಅನಧಿಕೃತ ಕಸಾಯಿಖಾನೆಗಳನ್ನು ಕಡ್ಡಾಯವಾಗಿ ಮುಚ್ಚಬೇಕು.

  • ಚಿಲ್ಲರೆ ಅಂಗಡಿಗಳು: ಚಿಕನ್, ಮಟನ್, ಬೀಫ್ ಮತ್ತು ಮೀನು ಮಾರಾಟ ಮಾಡುವ ಎಲ್ಲಾ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ.

  • ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು: ಹೋಟೆಲ್‌ಗಳಲ್ಲಿ ಹಸಿ ಮಾಂಸದ ಮಾರಾಟ ಅಥವಾ ಸಂಸ್ಕರಣೆಗೆ ಅವಕಾಶವಿರುವುದಿಲ್ಲ.

ಚಿಕನ್ ಅಂಗಡಿಗಳ ಬಂದ್

ಚಿಕನ್ ಅಂಗಡಿಗಳ 'ಡಬಲ್ ಬಂದ್'


ಚಿಕನ್ ಅಂಗಡಿಗಳ 'ಡಬಲ್ ಬಂದ್'

ಏತನ್ಮಧ್ಯೆ, ಈಗಾಗಲೇ ಬೆಂಗಳೂರಿನ ಸಾವಿರಾರು ಚಿಕನ್ ಅಂಗಡಿಗಳು ಇಂದು (ಸೆಪ್ಟೆಂಬರ್ 3, ಗುರುವಾರ) ದಿನದಿಂದಲೇ ಮುಚ್ಚಲ್ಪಟ್ಟಿವೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಜಾರಿಗೆ ತಂದಿರುವ ಪ್ರತಿ ಕೆಜಿ ಕೋಳಿ ತ್ಯಾಜ್ಯಕ್ಕೆ ₹5 ಸಂಗ್ರಹಣಾ ಶುಲ್ಕವನ್ನು ವಿರೋಧಿಸಿ, ಕರ್ನಾಟಕ ಕೋಳಿ ವ್ಯಾಪಾರಿಗಳ ಸಂಘ (KPTA) ಸೆಪ್ಟೆಂಬರ್ 3 ಮತ್ತು 4 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.

ಮುಂದುವರೆದು, ಜನ್ಮಾಷ್ಟಮಿ ನಿಮಿತ್ತ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಮುನ್ಸಿಪಲ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಬಿಎ ಎಚ್ಚರಿಸಿದೆ. ಇನ್ನು, ಶನಿವಾರ ಅಂದರೆ ಸೆಪ್ಟೆಂಬರ್ 5ರ ಬೆಳಿಗ್ಗೆಯಿಂದ ಎಂದಿನಂತೆ ಮಾಂಸ ಮಾರಾಟ ಪುನರಾರಂಭಗೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕ್‌ನ F-16 ವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ಅವಧಿಗೂ ಮುನ್ನವೇ ನಿವೃತ್ತಿ; ಈಗ ಗೋವಾ ಏರ್ಲೈನ್ಸ್ ಪೈಲಟ್!

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

Asian Games 2026: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಜೈಲು ಕೈದಿ ಜೊತೆಗೆ ಸರಸ ಸಲ್ಲಾಪ: PSI ಜಯಶ್ರೀ ಸಸ್ಪೆಂಡ್!

ಹಾಸನ: KSRTC ಬಸ್, ATM ವಾಹನದ ನಡುವೆ ಭೀಕರ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ