ದಸರಾಗೆ ಬರುತ್ತಿದ್ದಾನೆ ರಣಬೇಟೆಗಾರ ಅಭಿಮನ್ಯು Online Desk
ರಾಜ್ಯ

ಚಿನ್ನದ ಅಂಬಾರಿ ವೀರನಿಗೆ ಸಿಗಲಿದೆ ರಾಜಮರ್ಯಾದೆ: 2026ರ ದಸರಾದಲ್ಲಿ ನಿಶಾನೆ ಆನೆಯಾಗಿ 'ಅಭಿಮನ್ಯು' ಎಂಟ್ರಿ; ಪಟ್ಟದ ಆನೆಯಾಗಿ ಶ್ರೀಕಂಠ ಆಯ್ಕೆ

ಅಭಿಮಾನಿಗಳ ಪ್ರೀತಿಗೆ ಮಣಿದ ಸರ್ಕಾರ, ದಸರಾಗೆ ಬರುತ್ತಿದ್ದಾನೆ ರಣಬೇಟೆಗಾರ ಅಭಿಮನ್ಯು; ಪಟ್ಟದ ಆನೆಯಾಗಿ ಶ್ರೀಕಂಠ, ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆ; ಹಾಗಾದ್ರೆ, 'ಅಂಬಾರಿ ಆನೆ' ಯಾವುದು?

ಮೈಸೂರು: ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಸತತ 6 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ವಿಜೃಂಭಣೆಯಿಂದ ಹೆಜ್ಜೆ ಹಾಕಿದ್ದ, ಏಷ್ಯಾದ ನಂ.1 ಕುಮ್ಕಿ ಆನೆಯಾದ ಅಭಿಮನ್ಯು ಅಭಿಮಾನಿಗಳಿಗೆ ಗುಡ್ ನ್ಯೂಸ್; ಅದುವೇ, ಈ ಬಾರಿಯ ದಸರಾಗೆ ಬರುತ್ತಿದ್ದಾನೆ ರಣ ಬೇಟೆಗಾರ ಅಭಿಮನ್ಯು. ಹೌದು, 2026ರ ಮೈಸೂರು ದಸರಾ ಮಹೋತ್ಸವದಲ್ಲಿ ಕ್ಯಾಪ್ಟನ್ ಅಭಿಮನ್ಯು 'ನಿಶಾನೆ ಆನೆ'ಯಾಗಿ ಭಾಗವಹಿಸುವುದು ಅಧಿಕೃತವಾಗಿ ಖಚಿತಪಟ್ಟಿದೆ. ಆ ಕುರಿತ ವರದಿ ಇಲ್ಲಿದೆ:

60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಿ, ಆಗಸ್ಟ್ 26ರ ಗಜಪಯಣದ ವೇಳೆ ಗೌರವಯುತ ಬೀಳ್ಕೊಡುಗೆ ನೀಡಲಾಗಿತ್ತು. ಆದರೆ, ದಸರಾ ಆನೆಗಳ ಪಟ್ಟಿಯಲ್ಲಿ ಅಭಿಮನ್ಯು ಹೆಸರು ಇಲ್ಲದಿರುವುದಕ್ಕೆ ಅಭಿಮಾನಿಗಳಿಂದ ತೀವ್ರ ಬೇಸರ ಹಾಗೂ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಒತ್ತಾಯ ಕೇಳಿಬಂದಿತ್ತು. ಅದರಂತೆ, ಜನರ ಒತ್ತಾಯಕ್ಕೆ ಮಣಿದ ಸರ್ಕಾರ, ಅಂತಿಮವಾಗಿ ಅಭಿಮನ್ಯುವನ್ನು ಜಂಬೂಸವಾರಿಯಲ್ಲಿ ನಿಶಾನೆ ಆನೆಯನ್ನಾಗಿ ಕಳುಹಿಸಲು ಹಸಿರು ನಿಶಾನೆ ನೀಡಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತು ಪ್ರಕಟಣೆ ಹೊರಡಿಸಿ, ಅಭಿಮನ್ಯುವಿನ ಸುದೀರ್ಘ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ವಿಶೇಷ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪಟ್ಟದ ಆನೆಯಾಗಿ ಶ್ರೀಕಂಠ, ನಿಶಾನೆ ಆನೆಯಾಗಿ ಏಕಲವ್ಯ

ಮುಂದುವರೆದು, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಅರಮನೆಯ ಧಾರ್ಮಿಕ ವಿಧಿವಿಧಾನಗಳಿಗಾಗಿ 'ಶ್ರೀಕಂಠ' ಆನೆಯನ್ನು ಪಟ್ಟದ ಆನೆಯನ್ನಾಗಿ ಹಾಗೂ 'ಏಕಲವ್ಯ' ಆನೆಯನ್ನು ನಿಶಾನೆ ಆನೆಯನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ. ವಿಶೇಷವೆಂದರೆ, ಶ್ರೀಕಂಠ ಆನೆಗೆ ಇದು ಸತತ ಎರಡನೇ ಬಾರಿ ಪಟ್ಟದ ಆನೆಯಾಗುವ ಗೌರವ ಸಿಕ್ಕಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಅರಮನೆಯೊಳಗೆ ನಡೆಯುವ ಖಾಸಗಿ ದರ್ಬಾರ್, ಆಯುಧ ಪೂಜೆ ಮತ್ತು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಲ್ಲಿ ಇವೆರಡೂ ಆನೆಗಳು ಪ್ರಮುಖ ಪಾತ್ರ ವಹಿಸಲಿವೆ.

ಹಾಗಾದ್ರೆ, 'ಅಂಬಾರಿ ಆನೆ' ಯಾವುದು?

ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆಗಳಿಗೆ ತಾಲೀಮು ಭರದಿಂದ ಸಾಗುತ್ತಿದೆ. ಆದರೆ, ಅಕ್ಟೋಬರ್‌ನಲ್ಲಿ ನಡೆಯುವ ಮುಖ್ಯ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿರುವ 'ಅಂಬಾರಿ ಆನೆ'ಯನ್ನು ಅರಣ್ಯ ಇಲಾಖೆ ಇನ್ನೂ ಅಧಿಕೃತವಾಗಿ ಅಂತಿಮಗೊಳಿಸಿಲ್ಲ. ಇದರ ನಡುವೆ, ಧನಂಜಯ, ಮಹೇಂದ್ರ ಮತ್ತು ಪ್ರಶಾಂತ ಈ ಮೂರು ಆನೆಗಳನ್ನ, ತಾಲೀಮಿನ ಅವಧಿಯಲ್ಲಿ ನಡಿಗೆ, ಗಾಂಭೀರ್ಯ, ಸಿಡಿಮದ್ದು ತಾಲೀಮಿಗಳಿಗೆ ಸ್ಪಂದಿಸುವ ರೀತಿ ಹಾಗೂ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ, ಜಂಬೂಸವಾರಿಗೆ ಕೆಲವೇ ದಿನಗಳ ಮುನ್ನ ಒಬ್ಬರನ್ನು ಅಂಬಾರಿ ಆನೆಯನ್ನಾಗಿ ಅಧಿಕೃತವಾಗಿ ಘೋಷಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೈತರ ಸಾಲ ಮನ್ನಾಗೆ ಕೇಂದ್ರದ ನೆರವು ಕೇಳಿದ CM ಡಿಕೆ ಶಿವಕುಮಾರ್: ವಿಜಯೇಂದ್ರ, ಅಶೋಕ್‌ಗೂ ದೆಹಲಿಗೆ ಬರುವಂತೆ ಆಹ್ವಾನ

'ಫುಟ್‌ಪಾತ್‌ಗೆ ಮತ್ತೆ ಕನ್ನ ಹಾಕಿದ್ರೆ FIR, ಪೊಲೀಸ್-ಪಾಲಿಕೆ ಜಂಟಿ ಟಾಸ್ಕ್‌ಫೋರ್ಸ್'; ಕೃಷ್ಣ ಬೈರೇಗೌಡ ಖಡಕ್‌ ಎಚ್ಚರಿಕೆ

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

'Hanuman Ansh': ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video

ಮಳೆ ಕೊರತೆ, ಬರದ ಆತಂಕ; ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ