ಸಂಗ್ರಹ ಚಿತ್ರ Online Desk
ರಾಜ್ಯ

ನಿಮ್ಮ ಮನೆಗೂ SIR ನೋಟಿಸ್ ಬಂದಿದ್ಯಾ? ನೋಟಿಸ್ ಬಂದಿದ್ದರೆ ವಿಚಾರಣೆಗೆ ಕೊಂಡೊಯ್ಯಬೇಕಾದ ದಾಖಲೆಗಳಿವು!

ಕರ್ನಾಟಕದ 43 ಲಕ್ಷ ಮತದಾರರಿಗೆ ಎಲೆಕ್ಷನ್ ಕಮಿಷನ್ ಶಾಕ್: ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗದಿರಲು ತಕ್ಷಣ ಈ ಕೆಲಸ ಮಾಡಿ: ನೋಟಿಸ್ ಬಂದಿದ್ದರೆ ಕೊಂಡೊಯ್ಯಬೇಕಾದ ಪ್ರಮುಖ ಮೂರು ದಾಖಲೆಗಳಿವು! ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ, ಚುನಾವಣಾ ಆಯೋಗವು ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ ಜಾರಿ ಮಾಡಿದೆ. ತಂದೆ-ತಾಯಿ ವಂಶಾವಳಿ ಲಿಂಕ್ ಆಗದಿರುವುದು, ವಿಳಾಸದ ಗೊಂದಲ ಅಥವಾ ಇತರ ತಾಂತ್ರಿಕ ದೋಷಗಳಿರುವ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡದಂತೆ ತಡೆಯಲು ಈ ನೋಟಿಸ್ ನೀಡಲಾಗಿದೆ. ಸೆಪ್ಟೆಂಬರ್ 5 ರಿಂದಲೇ ಅಧಿಕೃತವಾಗಿ ವಿಚಾರಣೆ ಆರಂಭವಾಗಿದ್ದು, ನೋಟಿಸ್ ಪಡೆದ ಮತದಾರರು ನಿಗದಿಪಡಿಸಿದ ಕೇಂದ್ರಗಳಿಗೆ (ಶಾಲೆ, ಕಲ್ಯಾಣ ಮಂಟಪ ಅಥವಾ ಇಆರ್‌ಒ ಕಚೇರಿ) ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗಾಗಿ, ಈ ನೋಟಿಸ್‌ ಬಂದ ನಂತರ ಕೇಂದ್ರಗಳಿಗೆ ನೀವು ಯಾವ ಯಾವ ದಾಖಲೆಗಳನ್ನು ತಗೊಂಡು ಹೋಗಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ಕೊಂಡೊಯ್ಯಬೇಕಾದ ಪ್ರಮುಖ ದಾಖಲೆಗಳು (ಗರಿಷ್ಠ 3 ದಾಖಲೆಗಳು ಸಾಕು)

ಚುನಾವಣಾ ಆಯೋಗದ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಇಆರ್‌ಒ ಅಧಿಕಾರಿಗಳು ಆಧಾರ್ ಕಾರ್ಡ್ ಒಳಗೊಂಡಂತೆ ಗರಿಷ್ಠ 3 ದಾಖಲೆಗಳಿಗಿಂತ ಹೆಚ್ಚು ಕೇಳುವಂತಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಈ ಕೆಳಗಿನವುಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ಗುರುತಿನ ಮತ್ತು ವಿಳಾಸದ ಪುರಾವೆಗಳು:

    • ಆಧಾರ್ ಕಾರ್ಡ್

    • ವೋಟರ್ ಐಡಿ ಕಾರ್ಡ್

    • ರೇಷನ್ ಕಾರ್ಡ್

    • ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‌ಬುಕ್ ಅಥವಾ ಪಾಸ್‌ಪೋರ್ಟ್

    • ಇತ್ತೀಚಿನ ವಿದ್ಯುತ್ ಬಿಲ್ ಅಥವಾ ನೀರಿನ ಬಿಲ್

  • ಲಿಂಕೇಜ್ ಮತ್ತು ವಯಸ್ಸಿನ ಪುರಾವೆ (ವಂಶಾವಳಿ ದೃಢೀಕರಣಕ್ಕೆ):

    • ಜನನ ಪ್ರಮಾಣಪತ್ರ

    • ಎಸ್.ಎಸ್.ಎಲ್.ಸಿ (10th) ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣಪತ್ರ

  • ಒಂದು ವೇಳೆ ನಿಮ್ಮ ಬಳಿ ಇವು ಇಲ್ಲದಿದ್ದರೆ, ಪೋಷಕರ ವೋಟರ್ ಐಡಿ ವಿವರಗಳು ಅಥವಾ ಕಂದಾಯ ಇಲಾಖೆ ನೀಡುವ ಸ್ಥಿರ ನಿವಾಸಿ ಪ್ರಮಾಣಪತ್ರ ಅನ್ನು ಬಳಸಬಹುದು.

ಮುಂದುವರೆದು, ವಿಚಾರಣೆ ವೇಳೆ,  ನೋಟಿಸ್ ಪಡೆದ ವ್ಯಕ್ತಿಯೇ ನೇರವಾಗಿ ವಿಚಾರಣೆಗೆ ಹಾಜರಾಗಬೇಕು. ನಿಮ್ಮ ಪರವಾಗಿ ಕುಟುಂಬದ ಬೇರೆ ಸದಸ್ಯರು ಅಥವಾ ವಕೀಲರು ಹಾಜರಾಗಲು ಅವಕಾಶವಿರುವುದಿಲ್ಲ. ಜೊತೆಗೆ,  ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ಅವುಗಳ ಒರಿಜಿನಲ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಪರಿಶೀಲನೆಗೆ ತೋರಿಸಬೇಕಾಗುತ್ತದೆ.

ಅಕಸ್ಮಾತ್,  ನಿಮಗೆ ಇನ್ನು ನೋಟಿಸ್ ತಲುಪದಿದ್ದರೂ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್‌ notices_issued.html ಲಿಂಕ್ ಮೂಲಕ ನಿಮ್ಮ ಹೆಸರು ನೋಟಿಸ್ ಪಟ್ಟಿಯಲ್ಲಿದೆಯೇ ಎಂಬುದನ್ನು ಮೊಬೈಲ್‌ನಲ್ಲೇ ಪರಿಶೀಲಿಸಿಕೊಳ್ಳಬಹುದು.

ಒಟ್ಟಾರೆಯಾಗಿ, ಈ ಎಸ್‌ಐಆರ್ ಆಕ್ಷೇಪಣೆಗಳ ಸಲ್ಲಿಕೆ ಮತ್ತು ವಿಚಾರಣೆಯ ಪ್ರಕ್ರಿಯೆಯು ಸೆಪ್ಟೆಂಬರ್ 23, 2026 ರವರೆಗೆ ಚಾಲ್ತಿಯಲ್ಲಿರಲಿದ್ದು, ಯಾವುದೇ ಗೊಂದಲಗಳಿದ್ದರೆ ತಕ್ಷಣ ನಿಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

'ಇಸ್ರೋ ಖಾಸಗೀಕರಣವಾಗುತ್ತಿಲ್ಲ, ನಾವು ನೌಕರರೊಂದಿಗೆ ಮಾತನಾಡುತ್ತೇವೆ': ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ

ಯುಎಇಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ ಆಯಿಲ್ ದಿಢೀರ್ ಕುಸಿತ: ಕೊಚ್ಚಿಗೆ ವಾಪಸ್; ತಪ್ಪಿದ ದೊಡ್ಡ ಅನಾಹುತ

‘ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ’: ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್‌, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!

ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ: CM DK Shivakumar