ಗೋನೂರು ಕೆರೆ ತಲುಪಿದ ಭದ್ರಾ ಮೇಲ್ದಂಡೆ ಯೋಜನೆ ನೀರು 
ರಾಜ್ಯ

ಬರದನಾಡು ಚಿತ್ರದುರ್ಗಕ್ಕೆ ಐತಿಹಾಸಿಕ ಕ್ಷಣ; ಗೊನೂರು ಕೆರೆ ತಲುಪಿದ ಭದ್ರಾ ಮೇಲ್ದಂಡೆ ಯೋಜನೆಯ ನೀರು, Video

ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯ ಜಿಲ್ಲಾ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ಹರಿಸಲಾಗಿದ್ದ ನೀರು ಕೊನೆಗೂ ಇಂದು ಚಿತ್ರದುರ್ಗ ಜಿಲ್ಲೆಯ ಗೊನೂರು ಕೆರೆ ತಲುಪಿದೆ.

ಚಿತ್ರದುರ್ಗ: ಬರದನಾಡು ಎಂದು ಹೇಳಲಾಗುವ ಕೋಟೆ ನಾಡು ಚಿತ್ರದುರ್ಗ ಪಾಲಿಗೆ ಐತಿಹಾಸಿಕ ಕ್ಷಣವೊಂದು ದಾಖಲಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ನೀರು ಇದೀಗ ಜಿಲ್ಲೆಯ ಗೊನೂರು ಕೆರೆ ತಲುಪಿದೆ.

ಹೌದು.. ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯ ಜಿಲ್ಲಾ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ಹರಿಸಲಾಗಿದ್ದ ನೀರು ಕೊನೆಗೂ ಇಂದು ಚಿತ್ರದುರ್ಗ ಜಿಲ್ಲೆಯ ಗೊನೂರು ಕೆರೆ ತಲುಪಿದೆ.

ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಹರಿಸಲಾಗಿತ್ತು. ಇಂದು ಆ ನೀರು ಗೋನೂರು ಕೆರೆ ತಲುಬಿದೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನೂರಾರು ಸ್ಥಳೀಯರು ನೆರೆದಿದ್ದರು.

ಭದ್ರಾ ಜಲಾಶಯದಿಂದ ತರೀಕೆರೆ ಮಾರ್ಗವಾಗಿ ಅಜ್ಜಂಪುರ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ ಜಿಲ್ಲೆ ಮೂಲಕ ಗೋನೂರು ಕೆರೆ ತಲುಪಿದೆ.

ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿಬಿಡಲಾದ ನೀರು ಜಿಲ್ಲೆಯ ವಿವಿಧ ಭಾಗಗಳನ್ನು ದಾಟಿ ಗೊನೂರು ಕೆರೆ ಸೇರಿದೆ. ಇದರಿಂದ ಬರಪೀಡಿತ ಪ್ರದೇಶಗಳ ರೈತರು ಹಾಗೂ ನೀರಿನ ಸಮಸ್ಯೆ ಎದುರಿಸುತ್ತಿರುವ ಸಮುದಾಯಗಳಲ್ಲಿ ಹೊಸ ಆಶಾಭಾವನೆ ಮೂಡಿದೆ.

ಮೇಲ್ಭದ್ರಾ ಯೋಜನೆಯ ನೀರು ಗೊನೂರು ಕೆರೆ ತಲುಪಿರುವುದು ಚಿತ್ರದುರ್ಗ ಜಿಲ್ಲೆಯ ನೀರಾವರಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜತೆಗೆ ಭವಿಷ್ಯದಲ್ಲಿ ನೀರಿನ ಭದ್ರತೆ ಹೆಚ್ಚುವ ನಿರೀಕ್ಷೆ ಇದೆ.

ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರದುರ್ಗ ಜಿಲ್ಲೆಯ ಪಾಲಿಗೆ ಮೇಲ್ಭದ್ರಾ ನೀರಿನ ಈ ಪಯಣ ಮಹತ್ವದ ಬೆಳವಣಿಗೆಯಾಗಿದ್ದು, ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಭಾರತ ನಡೆಯುವುದು ಸಂವಿಧಾನದಿಂದಲೇ ಹೊರತು ಬಹಿಷ್ಕಾರದಿಂದಲ್ಲ’: ಹಿಂದು-ಮುಸ್ಲಿಂ ಒಗ್ಗಟ್ಟಿಗೆ ಅಠಾವಳೆ ಕರೆ, ಗರ್ಬಾ ಉತ್ಸವದಲ್ಲಿ ಮುಸ್ಲಿಮರ ನಿಷೇಧಕ್ಕೆ ವಿರೋಧ..!

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ; ಫಾರ್ಮ್‌ಹೌಸ್ ಪಕ್ಷಿ ವಿವಾದದಲ್ಲಿ ಕೋರ್ಟ್‌ನಿಂದ ಸಮನ್ಸ್ ಜಾರಿ

BSPಯಲ್ಲಿ ಮಹಾ ಬಿರುಕು: ಅಶೋಕ್ ಸಿದ್ಧಾರ್ಥ್ ನಿವೃತ್ತಿ ಬೆನ್ನಲ್ಲೇ ಸೋದರಳಿಯ ಆಕಾಶ್ ಆನಂದ್‌ನನ್ನು ಪಕ್ಷದ ಜವಾಬ್ದಾರಿಗಳಿಂದ ಕಿತ್ತೊಗೆದ ಮಾಯಾವತಿ..!

145 ಕಿಮೀ ವೇಗ... 6.5 ಅಡಿ ಎತ್ತರ! ‘ODI ವಿಶ್ವಕಪ್ ಹತ್ತಿರ ಬರುತ್ತಿದೆ, ಅವನಿಗೆ ಅವಕಾಶ ನೀಡಿ’: ಉದಯೋನ್ಮುಖ ವೇಗಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್

‘BRICS‌ ನಿಂದ ಭಾರತಕ್ಕೇನು ಲಾಭ?’: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನೆ, ತಿರುಗೇಟು ಕೊಟ್ಟ BJP