ರಮನಾಥ ರೈ ಸಂಚರಿಸುತ್ತಿದ್ದ ಕಾರು ಮತ್ತು ಬಸ್ಸು ಸಂಪೂರ್ಣ ನಜ್ಜುಗುಜ್ಜು  
ರಾಜ್ಯ

ಕಾರ್ಕಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಪಾರು

ಕಾರ್ಕಳದ ಸಾಣೂರಿನಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಖಾಸಗಿ ಬಸ್ ಮೂಡುಬಿದಿರೆಗೆ ತೆರಳುತ್ತಿತ್ತು. ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಕಾರ್ಕಳದ ಕಡೆಗೆ ಹೋಗುತ್ತಿತ್ತು. ಈ ವೇಳೆ ಭೀಕರ ಅಪಘಾತವಾಗಿದೆ.

ಉಡುಪಿ: ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ್ ರೈ ಅವರ ಕಾರು ಇಂದು ಭಾನುವಾರ ಮಧ್ಯಾಹ್ನ ವೇಳೆ ಭೀಕರ ಅಪಘಾತಕ್ಕೆ ಒಳಗಾಗಿದೆ. ದುರ್ಘಟನೆಯಲ್ಲಿ ಮಾಜಿ ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದ ಸಾಣೂರಿನಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಖಾಸಗಿ ಬಸ್ ಮೂಡುಬಿದಿರೆಗೆ ತೆರಳುತ್ತಿತ್ತು. ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಕಾರ್ಕಳದ ಕಡೆಗೆ ಹೋಗುತ್ತಿತ್ತು. ಈ ವೇಳೆ ಭೀಕರ ಅಪಘಾತವಾಗಿದೆ.

ಇನ್ನೋವಾ ಕಾರಿನಲ್ಲಿ ಮಾಜಿ ಸಚಿವ ರಮಾನಾಥ್​ ರೈ ಅವರು ತಮ್ಮ ಪಿಎ ಡೆನ್ಜೆಲ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಡೆನ್ಜೆಲ್ ಅವರ ಬಲಗಾಲು ಮುರಿದಿದೆ. ರಮಾನಾಥ್​ ರೈ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ದಾಖಲು

ಅಪಘಾತದ ಹೊಡೆತಕ್ಕೆ ಕಾರು ಹಾಗೂ ಖಾಸಗಿ ಬಸ್‌ಗೆ ಹಾನಿಯಾಗಿದೆ. ಇನ್ನು, ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಸ್ವಲ್ಪದರಲ್ಲಿ ಭಾರೀ ದೊಡ್ಡ ಅನಾಹುತ ತಪ್ಪಿದೆ.

ಗಾಯಾಳು ಡೆನ್ಜೆಲ್​ ಅವರನ್ನು ಮೊದಲು ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೋಯಾ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೆ ಕಾರಣ ಏನು?

ಕಾರ್ಕಳದ ಸಾಣೂರಿನಲ್ಲಿ ಬರುವ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಇದೆ. ಇದು ತಿಳಿಯದೇ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತ ಬೆನ್ನಲ್ಲೇ, ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತ ಉಂಟಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಹಾಗೂ ಅಲ್ಲಿನ ಸ್ಥಳೀಯರು ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!

ಯಾರನ್ನೂ ಬಿಟ್ಟಿಲ್ಲ ವೈಫಲ್ಯ: "ಆ ದಿನ ನನ್ನ ವೃತ್ತಿ ಜೀವನ ಮುಗಿದೇ ಹೋಗಿತ್ತು ಎಂದುಕೊಂಡಿದ್ದೆ...": ಅಜಿತ್ ದೋವಲ್