ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ವಿರುದ್ಧವೇ ತಿರುಗಿಬಿದ್ದು, ಬಾಸ್ ವಿರುದ್ಧವೇ ಸಾಕ್ಷಿ ಹೇಳಲು ನಿರ್ಧರಿಸಿರುವ ಪ್ರದೋಷ್ ರಾವ್ ಇನ್ನುಮಂದೆ ಆರೋಪಿಯಲ್ಲ. ಬದಲಾಗಿ ಪ್ರಾಸಿಕ್ಯೂಷನ್ ವಿಟ್ನೆಸ್ ಸಾಕ್ಷಿಯಾಗಲಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್ ಈಗ ಮಾಫಿ ಸಾಕ್ಷಿಯಾಗಿರುವುದರಿಂದ ಆರೋಪಿ ಎಂಬುದನ್ನು ಡಿಲಿಟ್ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಪ್ರದೋಷ್ ಇನ್ಮುಂದೆ ಪ್ರಕರಣದ ಸಾಕ್ಷಿಯಾಗಲಿದ್ದಾರೆ.
ಪ್ರದೋಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ ಹಿನ್ನಲೆಯಲ್ಲಿ ಚಾರ್ಜ್ಶೀಟ್ನಲ್ಲಿ ಆರೋಪಿ ಎಂಬುದನ್ನು ಡಿಲೀಟ್ ಮಾಡುವಂತೆ ಪ್ರದೋಷ್ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದರು. ಮನವಿಯನ್ನು ಪರಿಗಣಿಸಿದ ಕೋರ್ಟ್, ಚಾರ್ಜ್ ಶೀಟ್ ನಲ್ಲಿ ಆರೋಪಿ 14 ಪ್ರದೂಷ್ ಎಂದಿರುವ ಹೆಸರು ಡಿಲೀಟ್ ಮಾಡಿ ಎಂದು ಸೂಚಿಸಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಲು ಒಪ್ಪಿಗೆ ನೀಡಿರುವ 59ನೇ ಸಿಸಿಹೆಚ್ ಕೋರ್ಟ್, ಇದೀಗ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸೆಪ್ಟೆಂಬರ್ 28ರಂದು ದಿನಾಂಕ ನಿಗದಿ ಮಾಡಿದೆ.
ಸೆಪ್ಟೆಂಬರ್ 28 ರಂದು ಪ್ರದೋಷ್ ರಾವ್ ನ್ಯಾಯಾಧೀಶರ ಎದುರು ಹಾಜರಾಗಿ ಮಾಫಿ ಸಾಕ್ಷಿ ನುಡಿಯಲಿದ್ದಾರೆ. ಇತ್ತ ಮಾಫಿ ಸಾಕ್ಷಿ ಅದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆಮಾಡಲು ದರ್ಶನ್ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.