ಡ್ರಮ್ಮರ್‌ ದೇವ 
ರಾಜ್ಯ

ಸಂಗೀತ ಲೋಕಕ್ಕೆ ಆಘಾತ: ‘ಕನ್ನಡ ಶಿವಮಣಿ’ ಎಂದೇ ಖ್ಯಾತರಾಗಿದ್ದ ಖ್ಯಾತ ಡ್ರಮ್ಮರ್‌ ದೇವ ಇನ್ನಿಲ್ಲ..!

ಕಳೆದ ಜೂನ್‌ನಲ್ಲಿ ದೇವ್‌ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್‌) ಕಾಣಿಸಿಕೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿತ್ತು. ಗ್ಯಾಂಗ್ರಿನ್‌ ಸಮಸ್ಯೆಯಿಂದ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ‘ಕನ್ನಡ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಜನಪ್ರಿಯ ಡ್ರಮ್ಮರ್‌ ದೇವ್‌ ಅವರು ನಿಧನರಾಗಿದ್ದಾರೆ.

ದೇವ್‌ ಅವರು, ಆರ್‌.ಆರ್‌. ನಗರದ ಸ್ಕಂದಶ್ರೀ ಅಪಾರ್ಟ್‌ಮೆಂಟ್‌ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

ತಮ್ಮದೇ ವಿಭಿನ್ನ ಬೀಟ್‌ ಶೈಲಿ ಹಾಗೂ ಅದ್ಭುತ ಪ್ರದರ್ಶನದ ಮೂಲಕ ಸಂಗೀತಾಸಕ್ತರ ಮನಗೆದ್ದಿದ್ದ ದೇವ್‌, ಸ್ಯಾಂಡಲ್‌ವುಡ್‌ ಸೇರಿದಂತೆ ಹಲವು ವೇದಿಕೆಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಆರ್‌ಸಿಬಿ ಪಂದ್ಯಾವಳಿಗಳ ವೇಳೆ ಲೈವ್‌ ಬೀಟ್‌ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಕ್ರೇಜ್‌ ಹೆಚ್ಚಿಸಿದ್ದರು.

ಕಳೆದ ಜೂನ್‌ನಲ್ಲಿ ದೇವ್‌ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್‌) ಕಾಣಿಸಿಕೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿತ್ತು. ಗ್ಯಾಂಗ್ರಿನ್‌ ಸಮಸ್ಯೆಯಿಂದ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.

ನಂತರ ಸ್ಟ್ರೋಕ್‌ನ ಪರಿಣಾಮ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

ಮತ್ತಷ್ಟು ಜಾಗತಿಕ ಬೆಂಬಲ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತದ ಬೆನ್ನಿಗೆ ನಿಂತ ಪೋರ್ಚುಗಲ್, ಮಾರಿಷಸ್!

ಇಸ್ರೇಲ್ ಮೇಲಿನ ಅಕ್ಟೋಬರ್ 7ರ ದಾಳಿ 16 ಬಾರಿ ಸಂಭವಿಸಿದ 9/11ರ ದಾಳಿಗೆ ಸಮಾನ- ನೆತನ್ಯಾಹು

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಗೋವಾದಲ್ಲಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ; ನಟ ವಿಶಾಲ್ ಗೆ ಗಾಯ! Video