ಸಂಗ್ರಹ ಚಿತ್ರ 
ರಾಜ್ಯ

ವಿಜಯಪುರದ ಕೆಲವು ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ; ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು

ಭೂಕಂಪದ ತೀವ್ರತೆಯು ಕಡಿಮೆಯಾಗಿದ್ದು, ಇದರ ಕಂಪನವು 'ಕೇಂದ್ರಬಿಂದುವಿನಿಂದ 50 ರಿಂದ 60 ಕಿಮೀ ವ್ಯಾಪ್ತಿಯಲ್ಲಿ ಅನುಭವಕ್ಕೆ ಬರಬಹುದು ಎಂದು ವಿಪತ್ತು ಮೇಲ್ವಿಚಾರಣಾ ಸಂಸ್ಥೆ ತಿಳಿಸಿದೆ.

ವಿಜಯಪುರ: ವಿಜಯಪುರದಲ್ಲಿ ಬುಧವಾರ ನಸುಕಿನ ಜಾವ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಬಸವನ ಬಾಗೇವಾಡಿಯಿಂದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3.9 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.

ಈ ಭೂಕಂಪವು ಬೆಳಗಿನ ಜಾವ 2.04ಕ್ಕೆ 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಇದರ ಕೇಂದ್ರಬಿಂದುವು 16.604 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.990 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು. ಭೂಕಂಪದ ತೀವ್ರತೆಯು ಕಡಿಮೆಯಾಗಿದ್ದು, ಇದರ ಕಂಪನವು 'ಕೇಂದ್ರಬಿಂದುವಿನಿಂದ 50 ರಿಂದ 60 ಕಿಮೀ ವ್ಯಾಪ್ತಿಯಲ್ಲಿ ಅನುಭವಕ್ಕೆ ಬರಬಹುದು ಎಂದು ವಿಪತ್ತು ಮೇಲ್ವಿಚಾರಣಾ ಸಂಸ್ಥೆ ತಿಳಿಸಿದೆ.

ಭೂಕಂಪನದ ಕೇಂದ್ರಬಿಂದು ಹುನಶ್ಯಾಲ ಗ್ರಾಮ ಪಂಚಾಯಿತಿಯಿಂದ ಪಶ್ಚಿಮಕ್ಕೆ 7.8 ಕಿ.ಮೀ., ಹೂವಿನ ಹಿಪ್ಪರಗಿ ಗ್ರಾಮ ಪಂಚಾಯಿತಿಯಿಂದ ಪಶ್ಚಿಮಕ್ಕೆ 11.2 ಕಿ.ಮೀ., ಆಲಮಟ್ಟಿ ಅಣೆಕಟ್ಟಿನಿಂದ ಈಶಾನ್ಯಕ್ಕೆ 31 ಕಿ.ಮೀ. ಹಾಗೂ ವಿಜಯಪುರ ನಗರದಿಂದ ನೈಋತ್ಯಕ್ಕೆ 38 ಕಿ.ಮೀ. ದೂರದಲ್ಲಿತ್ತು.

'ಭೂಕಂಪದ ತೀವ್ರತೆ ಕಡಿಮೆಯಿರುವುದರಿಂದ ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಆದಾಗ್ಯೂ ಸ್ಥಳೀಯವಾಗಿ ಕಂಪನಗಳು ಅನುಭವಕ್ಕೆ ಬರಬಹುದು. ಗಮನಿಸಲಾದ ತೀವ್ರತೆ ಮತ್ತು ಪ್ರಮಾಣ ಎರಡೂ ಕಡಿಮೆಯಾಗಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ' ಎಂದು KSNDMC ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಸುಲೈಮಾನ್ ಶಾ ಅಲಿಯಾಸ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!

ಬೆಂಗಳೂರು ವಿಸ್ತರಣೆಗೆ ಸರ್ಕಾರ ಹೊಸ ರೂಪುರೇಷೆ: ಭವಿಷ್ಯದ ಸಂಚಾರ ಸಮಸ್ಯೆ ತಡೆಯಲು ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಮಹಾ ಬದಲಾವಣೆ: GBA ಮಾದರಿಯಲ್ಲಿ ಮರುಸಂಘಟನೆ, ಅಕ್ಟೋಬರ್‌ನಲ್ಲಿ ಅಧಿಸೂಚನೆ ಸಾಧ್ಯತೆ..!