ಜೀವನಶೈಲಿ

ಸುಂದರ ಕನಸು ಬೀಳಬೇಕೆ? ಮನಸ್ಸಿಗೆ ಶಾಂತಿ, ನೆಮ್ಮದಿ ಮುಖ್ಯ!

Nagaraja AB
ವಾಷಿಂಗ್ಟನ್ : ಮನಸ್ಸಿಗೆ ಶಾಂತಿ, ನೆಮ್ಮದಿ ಇದ್ದರೆ  ಸುಂದರ  ಕನಸು ಬೀಳಲು ಸಾಧ್ಯವಿರುತ್ತದೆ.  ಮನುಷ್ಯನು ಸುಖ, ಶಾಂತಿ, ನೆಮ್ಮದಿಯಿಂದ ಇದ್ದಾಗ ಮಾತ್ರ   ಕನಸುಗಳು ಬೀಳಲು ಸಾಧ್ಯವಿರುತ್ತದೆ ಎಂಬುದು ಸಂಶೋಧಕರ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಮಾನಸಿಕ ಒತ್ತಡ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ  ಜನರನ್ನು ಅಧ್ಯಯನಕ್ಕೊಳಪಡಿಸಿದಾಗ  ಅತ್ಯಲ್ಪ ಪ್ರಮಾಣದಲ್ಲಿ ಕನಸು  ಬೀಳುವುದು ಕಂಡುಬಂದಿದೆ .
ಮನಸ್ಸಿನ ಶಾಂತಿ ಸೇರಿದಂತೆ ಕನಸಿನ  ಭಾವನೆಗಳು ಎಚ್ಚರದಿಂದ ಇರುವ  ವಿಭಿನ್ನ ಅಂಶವಲ್ಲಾ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಕನಸು ಕುರಿತು ಒಳ್ಳೆಯ ಸಂಶೋಧನೆ ಮಾಡಿರುವುದಾಗಿ ಸಂಶೋಧನೆಯ ನೇತೃತ್ವ ವಹಿಸಿರುವ ಪಿಲ್ಲರಿನ್  ಸಿಕ್ಕಾ ಹೇಳುತ್ತಾರೆ.
ಕನಸುಗಳಿಂದ  ಮಾನಸಿಕ  ಅಸ್ವಸ್ಥತೆಯ ಲಕ್ಷಣಗಳನ್ನು ಅಳೆಯುವುದಕ್ಕೆ ಆಗುವುದಿಲ್ಲ. ಇದರಿಂದ ಮನುಷ್ಯನ ಯೋಗಕ್ಷೇಮವನ್ನು ಅಳೆಯಬಹುದಾಗಿದೆ.  ಮನಸ್ಸಿನ ಶಾಂತಿ ಮತ್ತು ಭೀತಿಯ ನಡುವೆ  ಒಂದು ರೀತಿಯ ಏಕತೆಯೂ ಕಂಡುಬರುತ್ತದೆ ಎಂದು ಸಿಕ್ಕಾ ಹೇಳುತ್ತಾರೆ.
SCROLL FOR NEXT