ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ online desk
ಜೀವನಶೈಲಿ

2022 ರಲ್ಲಿ ಭಾರತದ 12.5 ಮಿಲಿಯನ್ ಮಕ್ಕಳು, ಹರೆಯದವರಿಗೆ ಸ್ಥೂಲಕಾಯ!

Srinivas Rao BV

ನವದೆಹಲಿ: ಭಾರತದಲ್ಲಿ 2022 ರ ಅಂಕಿ-ಅಂಶಗಳ ಪ್ರಕಾರ 12.5 ಮಿಲಿಯನ್ ಮಕ್ಕಳು, ಹರೆಯದವರಿಗೆ ಸ್ಥೂಲ ಕಾಯ ಸಮಸ್ಯೆ ಇದೆ ಎಂದು ಲ್ಯಾನ್ಸೆಟ್ ಅಧ್ಯಯನ ವರದಿ ತಿಳಿಸಿದೆ.

12.5 ಮಿಲಿಯನ್ ಪೈಕಿ 7.3 ಮಿಲಿಯನ್ ಮಂದಿ ಹುಡುಗರಿದ್ದು 5.2 ಮಿಲಿಯನ್ ಯುವತಿಯರಿದ್ದಾರೆ. ಜಾಗತಿಕವಾಗಿ ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿರುವ ಮಕ್ಕಳು, ಹರೆಯದವರು, ವಯಸ್ಕರ ಸಂಖ್ಯೆ 1 ಬಿಲಿಯನ್ ದಾಟಿದೆ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಹೇಳಿದೆ.

1990 ರಿಂದ ಕಡಿಮೆ ತೂಕದ ಜನರ ಸಂಖ್ಯೆ ಕ್ಷೀಣಿಸುವಿಕೆಯೊಂದಿಗೆ, ಹೆಚ್ಚಿನ ದೇಶಗಳಲ್ಲಿ ಸ್ಥೂಲಕಾಯತೆಯು ಅಪೌಷ್ಟಿಕತೆಯ ಸಾಮಾನ್ಯ ರೂಪವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸ್ಥೂಲಕಾಯತೆ ಮತ್ತು ಕಡಿಮೆ ತೂಕ ಎರಡೂ ಅಪೌಷ್ಟಿಕತೆಯ ರೂಪಗಳಾಗಿವೆ ಮತ್ತು ಅನೇಕ ವಿಧಗಳಲ್ಲಿ ಜನರ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಇತ್ತೀಚಿನ ಅಧ್ಯಯನವು ಕಳೆದ 33 ವರ್ಷಗಳಲ್ಲಿ ಎರಡೂ ರೀತಿಯ ಅಪೌಷ್ಟಿಕತೆಯ ಜಾಗತಿಕ ಟ್ರೆಂಡ್ ಗಳ ಬಗ್ಗೆ ವಿವರವಾದ ಚಿತ್ರಣವನ್ನು ಒದಗಿಸುತ್ತದೆ. NCD ರಿಸ್ಕ್ ಫ್ಯಾಕ್ಟರ್ ಸಹಯೋಗ (NCD-RisC) -- ವಿಜ್ಞಾನಿಗಳ ಜಾಗತಿಕ ಜಾಲ- ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಯ ವಿಶ್ಲೇಷಣೆ ವಿಶ್ವದ ಮಕ್ಕಳು ಮತ್ತು ಹದಿಹರೆಯದವರಲ್ಲಿ, 1990ಕ್ಕೆ ಹೋಲಿಕೆ ಮಾಡಿದರೆ 2022 ರಲ್ಲಿ ಸ್ಥೂಲಕಾಯತೆಯ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅಂದಾಜಿಸಿದೆ.

SCROLL FOR NEXT