ಸಿಂಕ್ ವಾಸನೆ ಮತ್ತು ಬ್ಲಾಕ್ ತಡೆಯಲು ಸುಲಭ ಉಪಾಯ  AI Image
ಜೀವನಶೈಲಿ

ಅಡುಗೆಮನೆ ಸಿಂಕ್‌ನಿಂದ ಗಬ್ಬು ವಾಸನೆ ಬರ್ತಾಯಿದಿಯಾ? ಹಾಗಾದ್ರೆ, ಪ್ಲಂಬರ್ ಕರೆಯದೆ ಈ ಕೆಲಸ ಮಾಡಿ: ಒಂದೇ ನಿಮಿಷದಲ್ಲಿ ಸಿಗಲಿದೆ ಪರಿಹಾರ!

ಅಡುಗೆಮನೆ ಸಿಂಕ್‌ನಿಂದ ಗಬ್ಬು ವಾಸನೆ ಬರ್ತಿದ್ಯಾ? ಎಷ್ಟೇ ನೀರು ಹಾಕಿದರೂ, ಫಿನೈಲ್ ಹಾಕಿದರೂ ವಾಸನೆ ಹೋಗ್ತಿಲ್ವಾ? ಇದಕ್ಕೆ ಕಾರಣ ಸಿಂಕ್ ಮೇಲಲ್ಲ, ಒಳಗಿನ ಪೈಪ್‌ನಲ್ಲಿದೆ! ಹಾಗಾಗಿ, ಪ್ಲಂಬರ್ ಕರೆಯುವ ಮುನ್ನ ಮನೆಯಲ್ಲೇ ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ:

Kitchen Hacks: ಅಡುಗೆಮನೆ ಸಿಂಕ್‌ನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಎಷ್ಟೇ ನೀರು ಸುರಿದರೂ, ಸ್ವಚ್ಛಗೊಳಿಸಿದರೂ ವಾಸನೆ ಮಾತ್ರ ಹೋಗುತ್ತಿಲ್ಲವೇ? ಸಮಸ್ಯೆ ಸಿಂಕ್ ಮೇಲ್ಭಾಗದಲ್ಲಿ ಅಲ್ಲ, ಅದರ ಒಳಗಿನ ಪೈಪ್‌ನಲ್ಲಿ ಅಡಗಿದೆ! ಎಣ್ಣೆ, ಅನ್ನದ ಗಂಜಿ ಹಾಗೂ ಆಹಾರದ ಸಣ್ಣ ತುಂಡುಗಳು ಪೈಪ್‌ನಲ್ಲಿ ಸಿಲುಕಿ ಕೊಳೆಯುವುದರಿಂದ ದುರ್ವಾಸನೆ ಉಂಟಾಗುತ್ತದೆ. ಪ್ಲಂಬರ್ ಕರೆಯುವ ಮೊದಲು ಮನೆಯಲ್ಲೇ ಮಾಡಬಹುದಾದ ಈ ಸರಳ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ವಾಸನೆಗೆ ಕಾರಣವೇನು?

ನಾವು ಎಣ್ಣೆ, ತುಪ್ಪದ ಪಾತ್ರೆ ತೊಳೆದಾಗ ಆ ಎಣ್ಣೆ ಪೈಪ್ ನಲ್ಲಿ ಅಂಟಿಕೊಳ್ಳುತ್ತದೆ. ಅದಕ್ಕೆ ಅನ್ನ, ಸಾಂಬಾರು, ಕಾಫಿ ಪುಡಿ ಅಂಟಿ ಗಟ್ಟಿ ಆಗುತ್ತದೆ. ಈ ಕೊಳೆ ಕೊಳೆತು ಬ್ಯಾಕ್ಟೀರಿಯಾ ಆಗಿ ಗಬ್ಬು ವಾಸನೆ ಬರುತ್ತದೆ. ಸಿಂಕ್ ನ ಕೆಳಗಿನ U-ಆಕಾರದ ಪೈಪ್ ನಲ್ಲೇ ಬಹಳಷ್ಟು ಕೊಳೆ ಸೇರಿರುತ್ತದೆ.

  • ಬಿಸಿ ನೀರು + ಉಪ್ಪು ಮೊದಲ ಚಿಕಿತ್ಸೆ:

ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ 2 ಲೀಟರ್ ನೀರನ್ನು ಚೆನ್ನಾಗಿ ಕುದಿಸಿ. ಅದಕ್ಕೆ 2 ಚಮಚ ಉಪ್ಪು ಹಾಕಿ. ಈ ಕುದಿಯುವ ನೀರನ್ನು ನಿಧಾನವಾಗಿ ಸಿಂಕ್ ಗೆ ಸುರಿಯಿರಿ. ಬಿಸಿ ನೀರು ಎಣ್ಣೆಯ ಅಂಟನ್ನು ಕರಗಿಸುತ್ತದೆ, ಉಪ್ಪು ಬ್ಯಾಕ್ಟೀರಿಯಾ ಕೊಲ್ಲುತ್ತದೆ. ವಾರಕ್ಕೆ 2 ಬಾರಿ ಇದನ್ನು ಮಾಡಿದರೆ ವಾಸನೆ ಬರುವುದೇ ಇಲ್ಲ.

  • ಬೇಕಿಂಗ್ ಸೋಡಾ + ವಿನೆಗರ್ ಮ್ಯಾಜಿಕ್:

ಇದು ಅತ್ಯಂತ ಪರಿಣಾಮಕಾರಿ ಮನೆಮದ್ದು. ಮೊದಲು ಸಿಂಕ್ ಗೆ 3-4 ಚಮಚ ಬೇಕಿಂಗ್ ಸೋಡಾವನ್ನು ಹಾಕಿ, ಪೈಪ್ ಒಳಗೆ ಹೋಗುವಂತೆ ಮಾಡಿ. 10 ನಿಮಿಷ ಬಿಡಿ. ನಂತರ 1 ಲೋಟ ಬಿಳಿ ವಿನೆಗರ್ ಸುರಿಯಿರಿ. ಅದು ನೊರೆ ನೊರೆಯಾಗಿ ಬಂದು ಪೈಪ್ ಒಳಗಿನ ಕೊಳೆಯನ್ನು ಕರಗಿಸುತ್ತದೆ. 30 ನಿಮಿಷ ಹಾಗೆ ಬಿಟ್ಟು ನಂತರ ಬಿಸಿ ನೀರು ಸುರಿಯಿರಿ. ವಿನೆಗರ್ ಇಲ್ಲದಿದ್ದರೆ ನಿಂಬೆ ರಸ ಬಳಸಬಹುದು.

  • ನಿಂಬೆ ಸಿಪ್ಪೆಯಿಂದ ಫ್ರೆಶ್ ವಾಸನೆ:

ಸಿಂಕ್ ತೊಳೆದ ನಂತರ ನಿಂಬೆ, ಕಿತ್ತಳೆ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿ ಸಿಂಕ್ ಗೆ ಹಾಕಿ ನೀರು ಬಿಡಿ. ಇದು ನೈಸರ್ಗಿಕ ಫ್ರೆಶ್ನರ್ ಹಾಗೆ ಕೆಲಸ ಮಾಡುತ್ತದೆ. ಐಸ್ ಕ್ಯೂಬ್ ಜೊತೆ ನಿಂಬೆ ಸಿಪ್ಪೆ ಹಾಕಿ ಗ್ರೈಂಡ್ ಮಾಡಿದರೆ ಬ್ಲೇಡ್ ಇರುವ ಸಿಂಕ್ ಗಳಲ್ಲಿ ವಾಸನೆ ಬೇಗ ಹೋಗುತ್ತದೆ.

ಮತ್ತೆ ವಾಸನೆ ಬಾರದಂತೆ ತಡೆಯೋದು ಹೇಗೆ?

ಸಿಂಕ್ ಗೆ ಎಣ್ಣೆಯನ್ನು ನೇರವಾಗಿ ಸುರಿಯಬೇಡಿ. ಹಳೇ ಪೇಪರ್ ನಲ್ಲಿ ಹೀರಿಕೊಂಡು ಕಸಕ್ಕೆ ಹಾಕಿ. ಅನ್ನ, ಗಂಜಿ, ತರಕಾರಿ ಸಿಪ್ಪೆ, ಕಾಫಿ ಪುಡಿಯನ್ನು ಸಿಂಕ್ ಗೆ ಹಾಕಬೇಡಿ, ಬೇರೆ ಬುಟ್ಟಿಗೆ ಹಾಕಿ. ಸಿಂಕ್ ನಲ್ಲಿ ಜಾಲಿ ಫಿಲ್ಟರ್ ಬಳಸಿ. ರಾತ್ರಿ ಪಾತ್ರೆ ತೊಳೆದ ನಂತರ ಸ್ವಲ್ಪ ಡಿಶ್ ವಾಶ್ ಲಿಕ್ವಿಡ್ + ಬಿಸಿ ನೀರಿನಿಂದ ಸಿಂಕ್ ಅನ್ನು ಒರೆಸಿ. ತಿಂಗಳಿಗೆ ಒಮ್ಮೆ ಬೇಕಿಂಗ್ ಸೋಡಾ ಕ್ಲೀನಿಂಗ್ ಮಾಡಿ.ಈ ಸಣ್ಣ ಅಭ್ಯಾಸಗಳಿಂದ ಸಿಂಕ್ ಬ್ಲಾಕ್ ಆಗುವುದಿಲ್ಲ, ಗಬ್ಬು ವಾಸನೆ, ಜಿರಳೆ, ನೊಣ ಬರುವುದಿಲ್ಲ. ಸಮಸ್ಯೆ ಜಾಸ್ತಿ ಇದ್ದರೆ ಮಾತ್ರ ಪ್ಲಂಬರ್ ಸಲಹೆ ಪಡೆಯಿರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿ ನಾನಲ್ಲ: ವಿಜಯೇಂದ್ರಗೆ ಜನಾರ್ದನ ರೆಡ್ಡಿ ಪರೋಕ್ಷ ಟಾಂಗ್!

ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಚೆನ್ನೈ: ದೇಶದಲ್ಲೇ ಅತ್ಯಂತ ಕಲುಷಿತ ನಗರವಾದ ಗುಮ್ಮಿಡಿಪೂಂಡಿ; ವಾಯು ಗುಣಮಟ್ಟ ಸೂಚ್ಯಂಕ 342ಕ್ಕೆ ಏರಿಕೆ..!

'ಒಂದೇ ಕೋಟೆ, ಇಬ್ಬರು ಆಡಳಿತಗಾರರು': Purana Qilaದಲ್ಲಿ ಸಹಬಾಳ್ವೆಯ ಸಂದೇಶ ಸಾರಿದ ಪಾಕ್ ಸಚಿವ ಮುಸಾದಿಕ್ ಮಲಿಕ್..!

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ