ಅಣ್ಣಾರಿಂದ ಜನತಂತ್ರ ಮೋರ್ಚಾ
ಗಾಂಧಿವಾದಿ ಅಣ್ಣಾ ಹಜಾರೆ ಅವರು ಬುಧವಾರ 'ಜನತಂತ್ರ ಮೋರ್ಚಾ' ಎಂಬ ರಾಜಕೀಯೇತರ ಸಂಘಟನೆಯೊಂದನ್ನು ಸ್ಥಾಪಿಸಿದ್ದಾರೆ.
ಪಟನಾ: ಗಾಂಧಿವಾದಿ ಅಣ್ಣಾ ಹಜಾರೆ ಅವರು ಬುಧವಾರ 'ಜನತಂತ್ರ ಮೋರ್ಚಾ' ಎಂಬ ರಾಜಕೀಯೇತರ ಸಂಘಟನೆಯೊಂದನ್ನು ಸ್ಥಾಪಿಸಿದ್ದಾರೆ. ಪಟನಾದಲ್ಲಿ ನಡೆದ ರ್ಯಾಲಿ ವೇಳೆ ಅಣ್ಣಾ ತನ್ನ ಹೊಸ ಸಂಘಟನೆ ಬಗ್ಗೆ ಘೋಷಿಸಿದ್ದಾರೆ. ಇದೊಂದು ರಾಜಕೀಯೇತರ ಸಂಘಟನೆಯಾಗಿದೆ. ಇದು ಚುನಾವಣಾ ರಾಜಕೀಯಕ್ಕಿಳಿಯುವ ಸಂಘಟನೆಯಲ್ಲ. ಅಧಿಕಾರದ, ಲಾಭದ ಆಸೆಯಿಂದ ಇದನ್ನು ಸ್ಥಾಪಿಸಲಾಗಿಲ್ಲ. ಜನರ ಸೇವೆಗಾಗಿ ಹಾಗೂ ವ್ಯವಸ್ಥೆಯ ಬದಲಾವಣೆಗಾಗಿ 'ಜನತಂತ್ರ ಮೋರ್ಚಾ'ವನ್ನು ರಚಿಸಲಾಗಿದೆ ಎಂದು ಅಣ್ಣಾ ಹೇಳಿದ್ದಾರೆ. ಇದೇ ವೇಳೆ, ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ತರದಿದ್ದರೆ ಯುಪಿಎ ಸರ್ಕಾರ ಉರುಳುವ ಭೀತಿ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅಣ್ಣಾ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.