ಮಕ್ಕಳಿಗೂ ಗೊತ್ತು ಮೈಂಡ್ರೀಡಿಂಗ್!
ಪುಟಾಣಿಗಳಲ್ಲವೇ, ಅವರಿಗೇನೂ ಗೊತ್ತಾಗುವುದಿಲ್ಲ ಎಂದು ನೀವು ಅಂದುಕೊಂಡರೆ ಅದು ತಪ್ಪು. ಮಕ್ಕಳೇನೂ ಸಾಮಾನ್ಯರಲ್ಲ. ಅವರಿಗೆ ಎಲ್ಲವೂ ಗೊತ್ತಾಗುತ್ತದೆ ಎನ್ನುತ್ತಾರೆ ಕ್ಯಾಲಿಫೋರ್ನಿಯಾ ವಿವಿ ವಿಜ್ಞಾನಿಗಳು. ನೀವು ಕಲಿಸಿಕೊಟ್ಟರೆ ಮಾತ್ರ ಮಕ್ಕಳು ಕಲಿಯುವುದಲ್ಲ. ಒಂದೂವರೆ ವರ್ಷವಾಗುವುದಕ್ಕಿಂತ ಮುನ್ನವೇ ಮಕ್ಕಳಿಗೆ ಮೈಂಡ್ ರೀಡಿಂಗ್ ಗೊತ್ತಿರುತ್ತದಂತೆ. ನಿಮ್ಮ ಚಟುವಟಿಕೆಗಳನ್ನೆಲ್ಲ ಆ ಪುಟಾಣಿಗಳು ಗಮನಿಸುತ್ತಾ ಇರುತ್ತವಂತೆ. ವಿಜ್ಞಾನಿಗಳು ಈ ಅಧ್ಯಯನಕ್ಕೆಂದು 19 ತಿಂಗಳಿಂದ-5 ವರ್ಷದೊಳಗಿನ 91 ಮಕ್ಕಳನ್ನು ಬಳಸಿಕೊಂಡಿದ್ದರು. ವ್ಯಕ್ತಿಗಳ ಚಟುವಟಿಕೆಯನ್ನು ತೋರಿಸಿ, ನಂತರ ಪ್ರಶ್ನೆ ಕೇಳುವಾಗ ಮಕ್ಕಳು ಅವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದು ವಿಜ್ಞಾನಿಗಳಿಗೆ ಅರಿವಾಯಿತು. ಆದರೆ, ಬೇರೆ ಬೇರೆ ವಯಸ್ಸಿನ ಮಕ್ಕಳು ಒಂದು ಘಟನೆಯನ್ನು ವಿಭಿನ್ನ ರೀತಿಯಲ್ಲಿ ಅರ್ಥ ಮಾಡಿಕೊಂಡರು. ಹೀಗಿದ್ದರೂ, ಸಣ್ಣ ವಯಸ್ಸಿನ ಮಕ್ಕಳಿಗೂ ಮೈಂಡ್ ರೀಡಿಂಗ್ ಸಾಮರ್ಥ್ಯವಿದೆ ಎನ್ನುವುದು ತಿಳಿದುಬಂತು ಎಂದಿದ್ದಾರೆ ವಿಜ್ಞಾನಿಗಳು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.