ಗಿಫ್ಟ್ ಕಾರ್ಡ್ (ಮಾಹಿತಿ ಪ್ರಭ)
ಏನಿದು ಗಿಫ್ಟ್ ಕಾರ್ಡ್?
ಇದು ಒಂದು ರೀತಿಯ ಪ್ಲಾಸ್ಟಿಕ್ ಕಾರ್ಡ್. ಆದರೆ, ಈ ಕಾರ್ಡ್ ಬಳಸಿ ಸಾಲ ಮಾಡುವಂತಿಲ್ಲ. ಅಲ್ಲದೆ, ಖರ್ಚು ಮಾಡಿದ ಹಣ ಯಾವುದೇ ಬ್ಯಾಂಕ್ ಖಾತೆಯೊಂದಿಗೆ ನೇರ ಸಂಬಂಧ ಹೊಂದಿರುವುದಿಲ್ಲ. ಹಾಗಾಗಿ ಇದು ಕ್ರೆಡಿಟ್ ಕಾರ್ಡೂ ಅಲ್ಲ, ಡೆಬಿಟ್ ಕಾರ್ಡೂ ಅಲ್ಲ. ಇದೊಂದು ಪ್ರೀಪೇಡ್ ಕಾರ್ಡ್. 500ರಿಂದ 50 ಸಾವಿರದ ವರೆಗಿನ ಮುಖಬೆಲೆವುಳ್ಳ ಗಿಫ್ಟ್ ಕಾರ್ಡ್ಗಳು ಲಭ್ಯ ಇವೆ. ಇವುಗಳನ್ನು ನೀವು ಯಾರಿಗೆ ಬೇಕಾದರೂ ಉಡುಗೊರೆಯಾಗಿ ನೀಡಬಹುದು.
ಗಿಫ್ಟ್ ಕಾರ್ಡ್: 2 ವಿಧಗಳು
ಟಿ ಓಪನ್ ಲೂಪ್ ಕಾರ್ಡ್: ಇವು ಬ್ಯಾಂಕ್ಗಳಷ್ಟೇ ವಿತರಿಸುವ ಕಾರ್ಡ್ಗಳು. ವೀಸಾ ಕಾರ್ಡ್ ಅಥವಾ ಮಾಸ್ಟರ್ ಕಾರ್ಡ್ಗಳ ಸಹಯೋಗ ಇದಕ್ಕಿರುತ್ತದೆ. ಈ ಕಾರ್ಡ್ಗಳನ್ನು ದೇಶದ ಯಾವುದೇ ಭಾಗದಲ್ಲೂ, ಗಿಫ್ಟ್ ಕಾರ್ಡ್ ಸ್ವೀಕರಿಸುವ ಅಂಗಡಿಗಳಲ್ಲಿ ಬಳಸಬಹುದು.
ಟಿ ಕ್ಲೋಸ್ ಲೂಪ್ ಕಾರ್ಡ್: ಈ ರೀತಿಯ ಗಿಫ್ಟ್ ಕಾರ್ಡ್ಗಳನ್ನು ಕಂಪನಿಗಳು ನೀಡುತ್ತವೆ. ಈ ರೀತಿಯ ಕಾರ್ಡ್ಗಳನ್ನು ಆಯಾ ಕಂಪನಿಯ ಸ್ಟೋರ್ಗಳಲ್ಲಿನ ವಸ್ತುಗಳನ್ನು ಕೊಳ್ಳಲು ಮಾತ್ರ ಬಳಸಬಹುದು. ಬಿಗ್ಬಜಾರ್, ಫಾಸ್ಟ್ಟ್ರ್ಯಾಕ್, ಟೈಟಾನ್ನಂಥ ಕಂಪನಿಗಳು ಈ ರೀತಿಯ ಗಿಫ್ಟ್ ಕಾರ್ಡ್ ಸೌಲಭ್ಯ ಕಲ್ಪಿಸುತ್ತವೆ.
ಲಕ್ಷಣಗಳು
ಭಾರತದಲ್ಲಿ ಪ್ರಮುಖ ಬ್ಯಾಂಕ್ಗಳು ಗಿಫ್ಟ್ ಕಾರ್ಡ್ ಸೌಲಭ್ಯ ನೀಡುತ್ತವೆ.
ಬ್ಯಾಂಕ್ಗಳಲ್ಲಿ ಈ ರೀತಿಯ ಕಾರ್ಡ್ ಪಡೆಯಲು ಕೆವೈಸಿ ಅರ್ಜಿಯನ್ನು ಭರ್ತಿ ಮಾಡಬೇಕು. ಆದರೆ, ಕಂಪನಿಗಳು ನೀಡುವ ಗಿಫ್ಟ್ ಕಾರ್ಡ್ಗಳಿಗೆ ಇಂಥ ಅರ್ಜಿ ತುಂಬಿಸಬೇಕಾದ ಅಗತ್ಯ ಇಲ್ಲ.
ಗಿಫ್ಟ್ಕಾರ್ಡ್ಸ್ಇಂಡಿಯಾ.ಇನ್, ಇನ್ಫಿಬೀಮ್. ಕಾಂ, ಗಿಫ್ಟ್ಬಿಗ್.ಕಾಂ ಮತ್ತು ಇಂಡಿಯಾಪ್ಲಾಜಾ.ಕಾಂನಂತಹ ವೆಬ್ಸೈಟ್ಗಳೂ ಈಗ ಗಿಫ್ಟ್ಕಾರ್ಡ್ಗಳನ್ನು ಮಾರಾಟ ಮಾಡುತ್ತವೆ. ಅಲ್ಲದೆ, ಅವು ಗ್ರಾಹಕರ ಮನೆ ಬಾಗಿಲಿಗೆ ಈ ಕಾರ್ಡ್ಗಳನ್ನು ತಲುಪಿಸುತ್ತವೆ.
ಸಾಮಾನ್ಯವಾಗಿ ಬ್ಯಾಂಕ್ಗಳು ನೀಡುವ ಗಿಫ್ಟ್ಕಾರ್ಡ್ಗಳಿಗೆ ಮತ್ತೆ ಹಣ ತುಂಬುವಂತಿಲ್ಲ. ಒಮ್ಮೆ ಕಾರ್ಡ್ನಲ್ಲಿರುವ ಹಣ ಖಾಲಿಯಾಯಿತೋ ಬಳಿಕ ಅದನ್ನು ಕಸದಬುಟ್ಟಿಗೇ ಎಸೆಯಬೇಕು. ಆದರೆ, ಇತ್ತೀಚೆಗೆ ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ಗಳು ಮರು ಬಳಸಬಹುದಾದ ಗಿಫ್ಟ್ ಕಾರ್ಡ್ ಪರಿಚಯಿಸಿವೆ. ಮರು ಬಳಕೆಗಾಗಿ ಎಸ್ಬಿಐ 50, ಎಚ್ಡಿಎಫ್ಸಿ 100 ಶುಲ್ಕ ವಿಧಿಸುತ್ತವೆ.
ಸಾಮಾನ್ಯವಾಗಿ ಗಿಫ್ಟ್ಕಾರ್ಡ್ಗಳ ಬಳಕೆ ಅವಧಿ ಒಂದು ವರ್ಷ ಆಗಿರುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.