ಬಿಜೆಪಿ ಕಾರ್ಯಕರ್ತ 
ದೇಶ

ರ್ಯಾಲಿಗೆ ಹೋಗಿದ್ದಕ್ಕೆ ಸಿಗರೇಟ್‌ನಿಂದ ಸುಟ್ಟರು

ಕೇವಲ ರ್ಯಾಲಿಯಲ್ಲಿ ಭಾಗವಹಿಸಿದನೆಂಬ ಕಾರಣಕ್ಕೆ...

ಕೋಲ್ಕತಾ: ಕೇವಲ ರ್ಯಾಲಿಯಲ್ಲಿ ಭಾಗವಹಿಸಿದನೆಂಬ ಕಾರಣಕ್ಕೆ ಬಿಜೆಪಿ ಕಾರ್ಯಕರ್ತನೊಬ್ಬನನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹೊಡೆದು, ಸಿಗರೇಟ್‌ನಿಂದ ಸುಟ್ಟು ಮೈಯ್ಯೆಲ್ಲಾ ಗಾಯಗೊಳಿಸಲಾಗಿದೆ.

ಹೂಗ್ಲಿ ಜಿಲ್ಲೆಯ ಬನ್ಸ್‌ಬೇರಿಯಾದ ಬಿಶ್ನು ಚೌಧರಿ ಈ ಕುಕೃತ್ಯಕ್ಕೀಡಾದವ. ಕಳೆದ ಭಾನುವಾರ ಕೋಲ್ಕತ್ತಾದಲ್ಲಿ ಅಮಿತ್ ಶಾ ಭಾಗವಹಿಸಿದ್ದ ರ್ಯಾಲಿಗೆ ಚೌಧರಿ ಹೋಗಿದ್ದರು. ಇದು ಸ್ಥಳೀಯ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು.

ರ್ಯಾಲಿ ಮುಗಿದ ಮೂರು ದಿನಗಳ ನಂತರ, ಚೌಧರಿ ಮನೆಗೆ ಧಾವಿಸಿದ ಕಾರ್ಯಕರ್ತರು, ಆತನನ್ನು ಎಳೆದು ಹತ್ತಿರದ ಕ್ಲಬ್‌ಗೆ ಕೊಂಡೊಯ್ದರು. ಅಲ್ಲಿ ಆತನನ್ನು ಥಳಿಸಿದ್ದಾರೆ. ಅಲ್ಲದೆ, ಬಿಜೆಪಿ ಸಹವಾಸ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರುವಂತೆ ಒತ್ತಾಯಿಸಿದ್ದಾರೆ.

ಆದರೆ, ಚೌಧರಿ ಇದನ್ನು ನಿರಾಕರಿಸಿದರು. ಇದರಿಂದ ಮತ್ತಷ್ಟು ಕ್ಷುದ್ರರಾದ ಕಾರ್ಯಕರ್ತರು, ಚೌಧರಿಯನ್ನು ಸಿಗರೇಟ್‌ನಿಂದ ಚೌಧರಿಯ ಮೈ ಪೂರ್ತಿ ಸುಟ್ಟಿದ್ದಾರೆ. ಜೀವಭೀತಿ ಹಿನ್ನೆಲೆಯಲ್ಲಿ, ಚೌಧರಿ ತನ್ನ ಮನೆಯಿಂದಲೇ ರಿಜಿಸ್ಟರ್ ಅಂಚೆ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಒಂದು ಪ್ರತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ರವಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ತಬ್ಬಿಬ್ಬಾದ ಬಾಲಿವುಡ್ ನಟಿ ನಿಕಿತಾ ರಾವಲ್, Video ವೈರಲ್

ಇರಾನ್ ಯುದ್ಧದ ಎಫೆಕ್ಟ್: ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನು ಖಾಲಿ? ರಕ್ಷಣಾ ಕಂಪನಿಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಪೆಂಟಗನ್ ಸೂಚನೆ

ಬಿಹಾರ ಪೊಲೀಸ್ ಠಾಣೆಯಿಂದ ಬೃಹತ್ ಲಾರಿ ಕದ್ದ ಖದೀಮರು!