ದೇಶ

ಎನ್‌ಡಿಎ ಮೈತ್ರಿಗೆ ವೈಕೊ ಗುಡ್ ಬೈ

Rashmi Kasaragodu

ಚೆನ್ನೈ: ನಾಟಕೀಯ ಬೆಳವಣಿಗೆಯೊಂದರಲ್ಲಿ ವೈಕೋ ನೇತೃತ್ವದ ಎಂಡಿಎಂಕೆ, ಕೇಂದ್ರದಲ್ಲಿ ಅಧಿಕಾರದಲಿಲಿರುವ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು, ಶ್ರೀಲಂಕಾದ ಅಧ್ಯಕ್ಷ ಮಹಿಂದ್ರಾ ರಾಜಪಕ್ಷ ಜತೆಗೂಡಿ ಭಾರತ ಹಾಗೂ ಶ್ರೀಲಂಕಾ ನಡುವಿನ ಮೈತ್ರಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದಾರೆ. ಹಿಂದಿನಿಂದಲೂ ಮೈಕೋ ಅವರು ಎಲ್‌ಟಿಟಿಇ ಸಂಘಟನೆಯ ಪರವಾಗಿ ಗುರುತಿಸಿಕೊಂಡವರು. ಆದರೆ, ಈಗ ಮೋದಿಯವರು ಶ್ರೀಲಂಕಾ ಸರ್ಕಾರದ ಕಡೆಗೆ ಒಲವು ಹೊಂದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ, ಅವರು ಎನ್‌ಡಿಎ ಸಖ್ಯ ತೊರೆದಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ವೈಕೋ, ಶ್ರೀಲಂಕಾದಲ್ಲಿರುವ ತಮಿಳರ ವಿಚಾರದಲ್ಲಿ ತಮಿಳುನಾಡು ಜನರಿಗೆ ಕೊಟ್ಟಿದ್ದ ಆಶ್ವಾಸನೆಯನ್ನು ಮೋದಿ ಮರೆತಿದ್ದಾರೆ.  ಶ್ರೀಲಂಕಾ ಸರ್ಕಾರದ ಸಖ್ಯ ಬೆಳೆಸುವ ಮೂಲಕ , ತಮಿಳರಿಗೆ ಮೋದಿ ಮೋಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಭಾರತದ ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT