ದೇಶ

ಅಣುಶಕ್ತಿ ಸೇರಿದಂತೆ 16 ಮಹತ್ವದ ಒಪ್ಪಂದಗಳಿಗೆ ಭಾರತ-ರಷ್ಯಾ ಸಹಿ

Vishwanath S

ನವದೆಹಲಿ: ಭಾರತದ-ರಷ್ಯಾ ನಡುವಿನ 16 ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳು ಗುರುವಾರ ಸಹಿ ಹಾಕಿವೆ.

ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿ ಬಳಿಕ ಅಣುಶಕ್ತಿ, ರಕ್ಷಣಾ ತರಬೇತಿ, ತೈಲ, ಅನಿಲ, ಆರೋಗ್ಯ ಸೇರಿದಂತೆ 16 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾದೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದ್ದು, ಉಭಯ ದೇಶಗಳು ವ್ಯಾಪಾರ ಸಂಬಂಧ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದೊಂದಿಗೆ ಮಹತ್ವದ 16 ಒಪ್ಪಂದಗಳಿಕೆ ರಷ್ಯಾ ಸಹಿ ಹಾಕಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ರಕ್ಷಣಾ ಇಲಾಖೆಯ ಬಲವರ್ಧನೆಗಾಗಿ ರಷ್ಯಾದಿಂದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ಗಳನ್ನು ಖರೀದಿಸಲಾಗುವುದು. ರಷ್ಯಾ ದಶಕಗಳಿಂದ ಭಾರತದ ರಕ್ಷಣಾ ಕ್ಷೇತ್ರದ ಬಹು ಮುಖ್ಯ ಮಿತ್ರನೆನಿಸಿದೆ ಎಂದು ಮೋದಿ ಹೇಳಿದ್ದಾರೆ.

ಸ್ಮಾರ್ಟ್ ಸಿಟಿಗೆ ನೆರವು: ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆಗೆ ರಷ್ಯಾ ನೆರವು ನೀಡಲಿದೆ. ಅಲ್ಲದೆ ಭಾರತದಲ್ಲಿ 20ರಿಂದ 24 ಪರಮಾಣು ವಿದ್ಯುತ್ ಘಟಕಗಳನ್ನು ನಿರ್ಮಿಸಲು ರಷ್ಯಾ ಆಸಕ್ತಿ ತೋರಿದೆ.

SCROLL FOR NEXT