ದೇಶ

40 ದಲಿತ ಕುಟುಂಬಗಳು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ

Lakshmi R

ಗಯಾ: ಬಿಹಾರದ ಬೋಧ್ ಗಯಾದಲ್ಲಿ ಸುಮಾರು 40 ದಲಿತ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಸಂಚಲನ ಮೂಡಿಸಿದೆ.

ಮತಾಂತರ ಕುರಿತು ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯಾದ ನಿಶಾಂತ್ ಕುಮಾರ್ ತಿವಾರಿ, ಇದೀಗ ಮತಾಂತರಗೊಂಡಿರುವ ಕುಟುಂಬದವರು ಹಲವು ವರ್ಷಗಳಿಂದ ಚರ್ಚ್ಗಳಿಗೆ ತೆರಳುತ್ತಿದ್ದು, ಪ್ರಾರ್ಥನೆ ಸೇರಿದಂತೆ ಇತ್ಯಾದಿ ಚರ್ಚ್ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಆದ್ದರಿಂದ ಈ ವರ್ಗದ ಜನತೆಗೆ ಮತಾಂತರ ಹೊಸ ವಿಚಾರವೇನಲ್ಲ ಎಂದು ತಿಳಿಸಿದ್ದಾರೆ.

ಇದೇ ಊರಿನವರಾಗಿರುವ ಬಿಹಾರ ಮುಖ್ಯಮಂತ್ರಿ ಜಿತ್ತನ್ ರಾಮ್ ಮನ್ಝಿ, ಈ ವಿಚಾರ ಸಂಬಂಧ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಈ ಹಿಂದೆ 2008ರಲ್ಲಿ ಗಯಾ ಗ್ರಾಮದ ಸುಮಾರು 35 ಕುಟುಂಬಗಳು ಕ್ರಿಶ್ಟಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದವು.

ಬಡತನದಿಂದ ಬೇಯುತ್ತಿದ್ದು, ಉತ್ತಮ ಜೀವನಕ್ಕಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುವುದಾಗಿ, ಅವರು ವಿವರಿಸಿದ್ದಾರೆ.

ಈ ಮತಾಂತರ, ಬಲವಂತವಾಗಿ ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ಜಿತ್ತನ್ ರಾಮ್ ಮನ್ಝಿ, ಈ ಕುರಿತು ತನಿಖೆ ನಡೆಸಲು ಆದೇಶ ಹೊರಡಿಸಿದ್ದಾರೆ.

SCROLL FOR NEXT