ಸಾಂದರ್ಭಿಕ ಚಿತ್ರ 
ದೇಶ

ಶಾಂತಿನಗರದಲ್ಲಿ 11 ಲಕ್ಷ ದರೋಡೆ

ಶಾಂತಿನಗರದಲ್ಲಿನ ಕರ್ನಾಟಕ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಿದ್ದ...

ಬೆಂಗಳೂರು: ಶಾಂತಿನಗರದಲ್ಲಿನ ಕರ್ನಾಟಕ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಿದ್ದ ಖಾಸಗಿ ಏಜೆನ್ಸಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಮೂವರು ದುಷ್ಕರ್ಮಿಗಳು, ಶನಿವಾರ ಸಂಜೆ 11 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಎಸ್‌ಯುವಿ ವಾಹನದಲ್ಲಿ ಬಂದ ಬ್ಯಾಂಕ್‌ನ ಮೂವರು ಸಿಬ್ಬಂದಿ ಎಟಿಎಂಗೆ ತುಂಬಲು 2 ಬ್ಯಾಗ್ ಹಣ ತಂದಿದ್ದರು. ವಾಹನ ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಸಹ ಇದ್ದರು. ಈ ವೇಳೆ ಚಾಲಕ ವಾಹನದಲ್ಲಿ ಕುಳಿತಿದ್ದರು.

ಇಬ್ಬರು ಸಿಬ್ಬಂದಿ 1 ಬ್ಯಾಗ್ ತೆಗೆದುಕೊಂಡು ಎಟಿಎಂ ಒಳಗೆ ಹೋಗಿದ್ದರು. ಈ ವೇಳೆ ಬಂದ ಮೂವರು ದುಷ್ಕರ್ಮಿಗಳು ವ್ಯಾನ್ ಸಮೀಪ ಬಂದು ಪರಿಸ್ಥಿತಿ ಗಮನಿಸಿದ್ದಾರೆ.

ನಂತರ ಅವರಲ್ಲಿ ಒಬ್ಬ ಚಾಲಕನ ಜತೆ ಮಾತನಾಡುತ ವ್ಯಾನ್ ಪಕ್ಕದಲ್ಲಿ ಹಣ ಬಿದ್ದಿದೆ. ಅದು ನಿಮ್ಮದೇ ಇರಬಹುದು ಎಂದು ತಿಳಿಸಿದ್ದಾನೆ. ಅದನ್ನು ಕಂಡ ಚಾಲಕ ಕೆಳಗಿಳಿದು ಹಣದ ನೋಟುಗಳನ್ನು ತೆಗೆದುಕೊಂಡಿದ್ದಾನೆ. ಈ ವೇಳೆ ವಾಹನದಲ್ಲಿದ್ದ ಒಂದು ಬ್ಯಾಗ್‌ನ್ನು ಆರೋಪಿಗಳು ಕದ್ದೊಯ್ದಿದ್ದಾರೆ.

ಸಹಾಯ ಕೇಳಿಲ್ಲ: ದುಷ್ಕರ್ಮಿಗಳು ಲಕ್ಷಾಂತರ ರುಪಾಯಿ ದೋಚಿ ಪರಾರಿಯಾಗಿದ್ದರೂ ಸಿಬ್ಬಂದಿಯಾಗಲೀ ಅಥವಾ ಚಾಲಕನಾಗಲಿ ಸಹಾಯಕ್ಕಾಗಿ ಕೂಗಿಕೊಂಡಿಲ್ಲ. ಈ ಬಗ್ಗೆ ಸ್ಥಳೀಯರಿಗೆ ತಿಳಿಸಿ, ಆರೋಪಿಗಳನ್ನು ಹಿಡಿಯುವ ಪ್ರಯತ್ನವನ್ನೂ ಮಾಡಿಲ್ಲ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಅವರ ಪ್ರತಿಕ್ರಿಯೆ ಶೂನ್ಯವಾಗಿದ್ದು, ಯಾವುದೇ ಘಟನೆ ನಡೆದಿಲ್ಲ ಎಂಬ ಭಾವ ಅವರಲ್ಲಿ ಕಂಡುಬರುತ್ತಿದೆ.

ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಗಮನಿಸಿದರೆ ಎಟಿಎಂಗೆ ಹಣ ಹಾಕಲು ಬಂದಿದ್ದವರದ್ದೇ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel