ಸಾಂದರ್ಭಿಕ ಚಿತ್ರ 
ದೇಶ

ಕಿಸ್ ಆಫ್ ಲವ್ ಗೆ ಪ್ರತಿಭಟನೆ ಬಿಸಿ

ನೈತಿಕ ಪೊಲೀಸ್ ಗಿರಿ ವಿರೋಧಿಸಿ ಟೌನ್ ಹಾಲ್ ಎದುರು ನ.22ರಂದು...

ಬೆಂಗಳೂರು: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಟೌನ್ ಹಾಲ್ ಎದುರು ನ.22ರಂದು ನಡೆಸಲು ಉದ್ದೇಶಿಸಿರುವ 'ಕಿಸ್ ಆಫ್ ಲವ್'ಗೆ ಪೊಲೀಸರು ಅವಕಾಶ ನೀಡಿದರೆ, ಅದನ್ನು ವಿರೋಧಿಸಿ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರಣವಾನಂದ ರಾಮಸ್ವಾಮೀಜಿ ಹೇಳಿದ್ದಾರೆ.

ಕಿಸ್ ಆಫ್ ಲವ್ ಗೆ ಅವಕಾಶ ನೀಡಬಾರದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಂಗಳವಾರ ಕಚೇರಿಗೆ ಆಗಮಿಸಿದ್ದ ಪ್ರಮವಾನಂದ ಸ್ವಾಮೀಜಿ, ಸಾರ್ವಜನಿಕ ಸ್ಥಳದಲ್ಲಿ ಮುತ್ತಿಕ್ಕುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಹೆಣ್ಣು ಮಕ್ಕಳನ್ನು ಮಾತೃ ಭಾವನೆಯಿಂದ ಕಾಣಲಾಗುತ್ತದೆ.

ಹೀಗಾಗಿ, ಅಶ್ಲೀಲ ಪ್ರತಿಭಟನೆಗೆ ಅವಕಾಶ ಕೊಡಬಾರದು. ಒಂದು ವೇಳೆ ಕೊಟ್ಟರೆ ಅದೇ ದಿನ, ಅದೇ ಸ್ಥಳದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಖಚಿತವಿಲ್ಲ

ನೈತಿಕ ಪೊಲೀಸ್ಗಿರಿ ವಿರೋಧಿಸಿ  ಮಾನವ ಹಕ್ಕುಗಳ ಹೋರಾಟಗಾರ್ತಿ ರಚಿತ ತನೇಜಾ ಕಿಸ್ ಆಫ್ ಲವ್ ಡೇ ಆಯೋಜಿಸುತ್ತಿರುವುದಾಗಿ ಹೇಳಿದ್ದರು. ಆದರೆ, ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆ ಅವರು ಹಿಂಜರಿಯುತ್ತಿದ್ದಾರೆ.

ಈ ಸಂಬಂಧ 'ಕನ್ನಡಪ್ರಭ' ದೊಂದಿಗೆ ಮಾತನಾಡಿದ ರಚಿತಾ, ಕಿಸ್ ಆಫ್ ಲವ್ ಕಾರ್ಯಕ್ರಮ ಸಂಘಟಿಸಲು ಉದ್ದೇಶಿಲಾಗಿತ್ತು. ಆದರೆ, ಬುಧವಾರ ಸಂಜೆ ಸಮಾನ ವಯಸ್ಕರೊಂದಿಗೆ ಮತ್ತೊಮ್ಮ ಸಭೆ ನಡೆಸಿ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸಲಾಗುವುದು ಎಂದರು. ಪ್ರತಿಭಟನೆ ನಡೆಸಲು ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಲು ಹಿಂಜರಿದರು.

ಪ್ರೇಮಿಗಳ ವಿರುದ್ಧ ಕಿಡಿಗೇಡಿಗಳ ನೈತಿಕ ಪೊಲೀಸ್ ಗಿರಿ ಖಂಡಿಸಿ ಕೇರಳದಲ್ಲಿ ಆರಂಭವಾದ ಕಿಸ್ ಆಫ್ ಲವ್, ದೇಶದ ಇತರೆ ರಾಜ್ಯಗಳಲ್ಲೂ ವಿಸ್ತರಣೆಯಾಗುತ್ತಿದೆ. ಈಗಾಗಲೇ ದೆಹಲಿಯಲ್ಲಿ ಕಿಸ್ ಆಫ್ ಲವ್ ಪ್ರತಿಭಟನೆ ನಡೆಯಿತು. ಕಿಸ್ ಆಫ್ ಲವ್ಗೆ ಬೆಂಬಲ ಕೋರಿ ಫೇಸ್ಬುಕ್ನಲ್ಲಿ ಕಿಸ್ ಆಫ್ ಲವ್ ಬೆಂಗಳೂರು ಎಂದು ಪೇಜ್ ತೆರಯಲಾಗಿದ್ದು, ನೂರಾರು ಜನರು ಲೈಕ್ ಮಾಡಿದ್ದಾರೆ. ಅಲ್ಲದೇ ಪೇಜ್ನಲ್ಲಿ ಸಾಕಷ್ಟು ಜನರಿಂದ ವಿರೋಧವೂ ವ್ಯಕ್ತವಾಗಿದೆ. ಹೀಗಾಗಿ ಕೇರಣ ಹಾಗೂ ದೆಹಲಿ ಮಾದರಿಯಲ್ಲಿ ಕಿಸ್ ಆಫ್ ಲವ್ ನಗರದಲ್ಲಿ ನಡೆಯುವುದು ಅನುಮಾನವಿದೆ.

ಮೋಟಮ್ಮ ವಿರೋಧ


ನಗರದಲ್ಲಿ ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸುವುದಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಆಗ್ರಹಿಸಿದ್ದಾರೆ.

ಅತ್ಯಾಚಾರ ತಡೆ ಸಮಿತಿಯ ಮಹಿಳಾ ಉಪಸಮಿತಿ ಸಭೆ ನಡೆಸಿದ ಬಲಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈ ಕಾರ್ಯಕ್ರಮವನ್ನು ಖಂಡಿಸುತ್ತೇನೆ. ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದರು. ಉಪಸಮಿತಿ ಮೂರು ತಿಂಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಭೆ ನಡೆಸುತ್ತೇವೆ. ನೊಂದವರು ಈ ಸಮಿತಿಗೆ ಮನವಿ ಮತ್ತು ದೂರು ನೀಡಬಹುದು ಎಂದರು.

ಭಿಕ್ಷುಕರು, ಅಶಕ್ತರಿಗೆ ಚೈತನ್ಯ ತುಂಬಲಿ


ಕಿಸ್ ಮೂಲಕ ಪ್ರೀತಿ ತೋರಿಸಲೇಬೇಕು ಎಂದಾದಲ್ಲಿ, ಭಿಕ್ಷುಕರು, ಅಶಕ್ತರು, ಕಾಯಿಲೆ ಪೀಡಿತರಿಗೆ ಕಿಸ್ ಮಾಡಿ ಅವರಲ್ಲಿ ಚೈತನ್ಯ ತುಂಬಲಿ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದನ್ನು ಬಿಟ್ಟು ಅಶ್ಲೀಲ ರೀತಿಯಲ್ಲಿ ಕಿಸ್ ಮಾಡುವುದನ್ನು ಸಹಿಸಲಾಗುವುದಿಲ್ಲ.

- ಪ್ರಣವಾನಂದ ರಾಮಸ್ವಾಮೀಜಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!