ಮೋದಿ ಹಾಗೂ ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ ಅವರು ಕಠ್ಮಂಡು-ದೆಹಲಿ ನಡುವಿನ ಪಶುಪತಿನಾಥ ಎಕ್ಸ್‌ಪ್ರೆಸ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿದ್ದಾರೆ. 
ದೇಶ

ಸಾರ್ಕ್‌ಗೆ ಚೀನಾ ಲಾಬಿ

ಏಷ್ಯಾದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯಲು ಹಪಾಹಪಿಸುತ್ತಿರುವ ಚೀನಾದ ಕಣ್ಣು...

-ಪಾಕಿಸ್ತಾನ, ನೇಪಾಳ ನಾಯಕರ ಮೂಲಕ ಸದಸ್ಯತ್ವಕ್ಕೆ ಯತ್ನ

ಕಠ್ಮಂಡು:
ಏಷ್ಯಾದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯಲು ಹಪಾಹಪಿಸುತ್ತಿರುವ ಚೀನಾದ ಕಣ್ಣು ಈಗ ಸಾರ್ಕ್ ಗುಂಪಿನ ಮೇಲೆ ಬಿದ್ದಿದೆ. ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳ ಗುಂಪಾದ ಸಾರ್ಕ್ ಸದಸ್ಯತ್ವ ಪಡೆಯಲು ಈಗ ಚೀನಾ ಲಾಬಿ ಆರಂಭಿಸಿದೆ.

ಇದಕ್ಕಾಗಿ ನೇಪಾಳದ ಪ್ರಮುಖ ರಾಜಕಾರಣಗಳು ಮತ್ತು ರಾಯಭಾರಿಗಳ ಮೂಲಕ ಸಾರ್ಕ್ ಸದಸ್ಯತ್ವ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ಹೊರಟಿದೆ.

ಚೀನಾ ಎಷ್ಟೇ ವಿಶ್ವದ ಹಿರಿಯಣ್ಣನಾದ ಅಮೆರಿಕದ ಸರಿಸಮನಾಗಿ ಬೆಳೆಯುತ್ತಿದ್ದರೂ ದಕ್ಷಿಣ ಏಷ್ಯಾದಲ್ಲಿ ಭಾರತ ತನ್ನದೇ ಆದ ಪ್ರಭಾವ ಉಳಿಸಿಕೊಂಡಿದೆ. ಈ ಪ್ರಭಾವವನ್ನು ಮುರಿಯುವುದು ಚೀನಾದ ಗುರಿ. ಇದೇ ಕಾರಣಕ್ಕೆ ಚೀನಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಲಿಯು ಝೆನ್ ನೇತೃತ್ವದ ನಿಯೋಗವೊಂದು ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರನ್ನು ಭೇಟಿಯಾಗಲಿದೆ ಎಂದು ಹೇಳಲಾಗಿದೆ.

ಚೀನಾದ ಪರ ಪಾಕಿಸ್ತಾನವೂ ತೀವ್ರ ಲಾಬಿ ಆರಂಭಿಸಿದೆ. ಈ ಗುಂಪಿನಲ್ಲಿ ವೀಕ್ಷಕನಾಗಿ ಚೀನಾಗೆ ಮಹತ್ವದ ಪಾತ್ರ ನೀಡಬೇಕು ಎಂದು ಮಂಗಳವಾರ ನಡೆದ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಒತ್ತಾಯಿಸಿದೆ. ಶ್ರೀಲಂಕಾ ಕೂಡ ಚೀನಾದ ಕೃಪಾಕಟಾಕ್ಷದಲ್ಲೇ ಇದೆ. ಇನ್ನು ನೇಪಾಳ ಇತರೆ ರಾಷ್ಟ್ರಗಳು ಒಪ್ಪಿದರೆ ಚೀನಾಗೆ ಸದಸ್ಯತ್ವ ನೀಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಸದ್ಯ ಚೀನಾವು ಸಾರ್ಕ್‌ನ ಎಂಟು ವೀಕ್ಷಕ ರಾಷ್ಟ್ರಗಳಲ್ಲಿ ಒಂದಾಗಿದೆ.

ಪ್ರಸ್ತಾಪ ಆಗಿಲ್ಲ: ಸಾರ್ಕ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿಚೀನಾಗೆ ಸದಸ್ಯತ್ವ ನೀಡುವ ವಿಚಾರ ಪ್ರಸ್ತಾಪವಾಗಿಲ್ಲ. ಈ ವಿಚಾರ ಸಭೆಯ ಕಾರ್ಯಸೂಚಿಯಲ್ಲೇ ಇರಲಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!