ನವೆಂಬರ್ ೨೯ ರಿಂದ ಅಸ್ಸಾಂಗೆ ಪ್ರಧಾನಿ ೨ ದಿನದ ಭೇಟಿ
ರಧಾನಿ ನರೇಂದ್ರ ಮೋದಿ ನವೆಂಬರ್ ೨೯ ರಂದು ಅಸ್ಸಾಂಗೆ ಎರಡು ದಿನದ ಭೇಟಿಗೆ ತೆರಳಲಿದ್ದಾರೆ ...
ಗೌಹಾಟಿ:ಪ್ರಧಾನಿ ನರೇಂದ್ರ ಮೋದಿ ನವೆಂಬರ್ ೨೯ ರಂದು ಅಸ್ಸಾಂಗೆ ಎರಡು ದಿನದ ಭೇಟಿಗೆ ತೆರಳಲಿದ್ದಾರೆ ಎಂದು ಅಧಿಕೃತ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲೋಕಪ್ರಿಯ ಬೋರ್ದೋಲೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಪ್ರಧಾನಿ, ಅಲ್ಲಿಂದ ನೇರವಾಗಿ ಮಾಲಿಗಾವ್ ಆಟದ ಮೈದಾನಕ್ಕೆ ತೆರಳಿ ಮೇಘಾಲಯದ ಮೆಂಡಿಪಾಥರ್ ನಿಂದ ಗೌಹಾಟಿಗೆ ಹೋಗಲಿರುವ ಮೊದಲ ರೈಲಿಗೆ ರಿಮೋಟ್ ಕಂಟ್ರೋಲಿನ ಮೂಲಕ ಚಾಲನೆ ನೀಡಲಿದ್ದಾರೆ.
ಹಾಗೆಯೇ ದ ಅಸ್ಸಾಂ ಟ್ರಿಬ್ಯೂನ್ ದಿನಪತ್ರಿಕೆಗಳ ಗುಂಪಿನ ೭೫ ನೆ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.
ರಾಜ ಭವನದಲ್ಲಿ ಉಳಿಯಲಿರುವ ಪ್ರಧಾನಿ ಮೋದಿ, ನವೆಂಬರ್ ೩೦ ರಂದು ಪೋಲೀಸ್ ನಿರ್ದೇಶಕರ ಸಮಾವೇಶವನ್ನು ಉದ್ಘಾಟಿಸಿ ನಂತರ ಇಂಫಾಲ್ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.