ನವದೆಹಲಿ: ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಒಡಿಶಾ ಮೊದಲ ಸ್ಥಾನ ಪಡೆದಿದ್ದರೆ, ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಟ್ಟಿದ್ದರಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದೆ. ಹೀಗೆಂದು ನಗರಾಭಿವೃದ್ಧಿ ಸಚಿವಾಲಯದ ವರದಿ ತಿಳಿಸಿದೆ. ಕಳೆದ ವಿತ್ತೀಯ ವರ್ಷದಲ್ಲಿ ದೇಶಾದ್ಯಂತ 2,70,069 ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಈ ಪೈಕಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಶೇ.60(1,65,376)ರಷ್ಟು ಶೌಚಾಲಯಗಳು ನಿರ್ಮಾ ಗೊಂಡಿವೆ. ನಂತರದ ಸ್ಥಾನವನ್ನು ಮಧ್ಯಪ್ರದೇಶ(99,151) ಪಡೆದುಕೊಂಡರೆ, 4,697 ಶೌಚಾಲಯಗಳನ್ನು ನಿರ್ಮಿಸಿರುವ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಇನ್ನು ದೇಶಾದ್ಯಂತ 2014-15ರಲ್ಲಿ ಒಟ್ಟು 1,222 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಒಡಿಶಾದಲ್ಲಿ 740, ಅಂಡಮಾನ್ ಮತ್ತು ನಿಕೋಬಾರ್‍ನಲ್ಲಿ 200 ಮತ್ತು ಕರ್ನಾಟಕದಲ್ಲಿ 100 ಶೌಚಾಲಯಗಳು ನಿರ್ಮಾಣವಾಗಿವೆ. ಇದೇ ವೇಳೆ, ಕರ್ನಾಟಕದ 40 ನಗರಗಳಲ್ಲಿ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮಾಡಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.