ಉಗ್ರರು 
ದೇಶ

ಐವರು ಐಎಸ್ಐ ಉಗ್ರರ ಎನ್‌ಕೌಂಟರ್ ಮಾಡಿದ ತೆಲಂಗಾಣ ಪೊಲೀಸರು

ಕೋರ್ಟ್ ವಿಚಾರಣೆಗೆಂದು ಕರೆತರುವ ವೇಳೆ ಪರಾರಿಯಾಗಲು ಯತ್ನಿಸಿದ್ದ ಪಾಕಿಸ್ತಾನದ ಐಎಸ್ಐನ ಐವರು ಉಗ್ರರರನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಜನಗಾಂವ್(ವರಂಗಲ್): ಕೋರ್ಟ್ ವಿಚಾರಣೆಗೆಂದು ಕರೆತರುವ ವೇಳೆ ಪರಾರಿಯಾಗಲು ಯತ್ನಿಸಿದ್ದ ಪಾಕಿಸ್ತಾನದ ಐಎಸ್ಐನ ಐವರು ಉಗ್ರರರನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ವಿಚಾರಣೆಗೆಂದು ಈ ಐವರನ್ನು ವರಂಗಲ್ ಜೈಲಿನಿಂದ ಹೈದರಾಬಾದ್ ಗೆ ಕರೆತರಲಾಗುತ್ತಿತ್ತು. ಈ ವೇಳೆ ವರಂಗಲ್ ಜಿಲ್ಲೆ ಜನಗಾಂವ್ ಗ್ರಾಮದ ಬಳಿ ಆರೋಪಿಗಳು ಭದ್ರತಾ ಸಿಬ್ಬಂದಿಗಳಿಂದ ಬಂದೂಕುಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದು, ಅವರ ವಿರುದ್ಧ ಗುಂಡು ಹಾರಿಸಲಾಯಿತು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.

ಮೃತರನ್ನು ವಿಕಾರ್ ಅಹ್ಮದ್, ಸುಲೇಮಾನ್, ಇಝಾರ್ ಖಾನ್, ಮೊಹಮ್ಮದ್ ಜಾಕೀರ್, ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.

ಆರೋಪಿ ವಿಕಾರುದ್ದೀನ್ ಅಹ್ಮದ್ ತಂಡ ಈ ಹಿಂದೆ ಹೈದರಾಬಾದ್ ನ ಪೊಲೀಸ್ ಕಾನ್ಸ್ ಟೇಬಲ್ ಓರ್ವರನ್ನು ಹತ್ಯೆ ಮಾಡಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೂ ಸಂಚು ರೂಪಿಸಿದ್ದರು ಎನ್ನಲಾಗಿದೆ.

ವಿಕಾರುದ್ದೀನ್ ಭಯೋತ್ಪಾದನೆ ಹಿನ್ನೆಲೆ
ಉಗ್ರ ವಿಕಾರುದ್ದೀನ್ ತೆಹ್ರಿಕ್-ಗುಲಾಬ್-ಇ-ಇಸ್ಲಾಂ ಉಗ್ರ ಭಯೋತ್ಪಾದನೆ ಸಂಘಟನೆ ನಡೆಸುತ್ತಿದ್ದು, 2007ರಿಂದ ಉಗ್ರ ಚಟುವಟಿಕೆಯಲ್ಲಿ ಈ ಐವರು ತೊಡಗಿದ್ದರು.

2007ರಲ್ಲಿ ಬ್ಯಾಂಕ್ ಲೂಟಿ ವೇಳೆ ಕಾನ್ಸ್‌ಟೇಬಲ್ ಕೊಲೆ, 2009ರ ಮೇಲೆ 18ರಂದು ಗುಂಡಿನ ದಾಳಿ, 2010 ಮೇನಲ್ಲಿ ಕಾನ್ಸ್‌ಟೇಬಲ್ ಮೇಲೆ ಈ ಐವರ ತಂಡ ಹೈದರಾಬಾದ್ ನ ಫಲಕ್ ನಾಮಾದಲ್ಲಿ ಗುಂಡಿನ ದಾಳಿ ಕೊಲೆ ಮಾಡಿತ್ತು. ಪೊಲೀಸ್ ಕಾನ್ಸ್‌ಟೇಬಲ್ ಕೊಲೆ ಹಿನ್ನೆಲೆ 2010 ಜೂನ್ ನಲ್ಲಿ ವಿಕಾರುದ್ದೀನ್ ನನ್ನ ಪೊಲೀಸರು ಬಂಧಿಸಿದ್ದು, ಈ ವೇಳೆ  ಭಾರಿ ಶಸ್ತ್ರಾಸ್ತ್ರ ಜಪ್ತಿ ಮಾಡಲಾಗಿತ್ತು. ವಿಕಾರುದ್ದೀನ್ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!