ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಕಳ್ಳೆಪುರಿಯಂತೆ ಗಣಿ ಹಂಚಿದ್ರು

ಯುಪಿಎ ಸರ್ಕಾರದ ನೀತಿಗಳ ವಿರುದ್ಧ ಫ್ರಾನ್ಸ್ ನಲ್ಲೂ ಕಿಡಿಕಾರಿದ್ದಾರೆ. ಯುಪಿಎ ಸರ್ಕಾರ ಕಲ್ಲಿದ್ದಲು ಗಣಿಗಳನ್ನು ಕಳ್ಳೆಪುರಿ ರೀತಿಯಲ್ಲಿ ರೀತಿಯಲ್ಲಿ ಹಂಚಿಕೆ ಮಾಡಿತು ಎಂದು ಮೋದಿ ಆರೋಪಿಸಿದ್ದಾರೆ...

ಪ್ಯಾರಿಸ್: ಯುಪಿಎ ಸರ್ಕಾರದ ನೀತಿಗಳ ವಿರುದ್ಧ ಫ್ರಾನ್ಸ್ ನಲ್ಲೂ ಕಿಡಿಕಾರಿದ್ದಾರೆ. ಯುಪಿಎ ಸರ್ಕಾರ ಕಲ್ಲಿದ್ದಲು ಗಣಿಗಳನ್ನು ಕಳ್ಳೆಪುರಿ ರೀತಿಯಲ್ಲಿ ಹಂಚಿಕೆ ಮಾಡಿತು ಎಂದು ಮೋದಿ ಆರೋಪಿಸಿದ್ದಾರೆ.

ಭಾನುವಾರ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಅವರು, `ನೀವು ಕಲ್ಲಿದ್ದಲು ಗಣಿ ಹಂಚಿಕೆ ಹಗರಣದ ಬಗ್ಗೆ ಕೇಳಿರಬಹುದು. ಯಾರನ್ನಾದರೂ ಭೇಟಿಯಾದಾಗ ಪೆನ್ನು ಅಥವಾ ಕರವಸ್ತ್ರ ನೀಡುವಂತೆ 204 ಕಲ್ಲಿದ್ದಲು ಬ್ಲಾಕ್‍ಗಳನ್ನು ಹಂಚಿಕೆ ಮಾಡಲಾಯಿತು. ಒಂದು ಪೆನ್ನು ನೀಡುವಾಗಲೂ ಅದನ್ನು ಸರಿಯಾದ ವ್ಯಕ್ತಿಗೆ ನೀಡಿದ್ದೇನೆಯೇ ಎಂದು 10 ಬಾರಿ ನಾವು ಯೋಚಿಸುತ್ತೇವೆ. ಆದರೆ, ಯುಪಿಎ ಸರ್ಕಾರಕ್ಕೆ ಈ ರೀತಿಯ ಆಲೋಚನೆಯೇ ಬಂದಿರಲಿಲ್ಲ' ಎಂದು  ಆಕ್ಷೇಪಿಸಿದ್ದಾರೆ.

ಈ ಹಗರಣ ಕೋಲಾಹಲ ಸೃಷ್ಟಿಸಿತು. ಸುಪ್ರೀಂಕೋರ್ಟ್ ಕಲ್ಲಿದ್ದಲು ಹಂಚಿಕೆಯನ್ನು ರದ್ದು ಮಾಡಿತು. ಈ ಹಗರಣದಲ್ಲಿ ಮಾಜಿ ಪ್ರಧಾನಿಯೊಬ್ಬರ ಹೆಸರೂ ಕೇಳಿಬಂತು. ನಾನು ಆ ವಿಚಾರಕ್ಕೆ ಸಂಬಂಧಿಸಿ ಮಾತನಾಡಲು ಅಥವಾ ಟೀಕೆ ಮಾಡಲು ಬಯಸಲ್ಲ ಎಂದು ಮೋದಿ ಹೇಳಿದ್ದಾರೆ.

ಶನಿವಾರ ರಾತ್ರಿ ಎನ್ಆರ್‍ಐಗಳು  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಈ ವಿಚಾರ ತಿಳಿಸಿದ್ದಾರೆ.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಶೇ.10ರಷ್ಟು ಕೆಲಸವಷ್ಟೇ ಆಗಿದೆ. ಯಾವುದೇ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಇಂಥ ಕಾರ್ಯ ಮಾಡಿದರೆ `ಇನ್ನು 25ವರ್ಷ ನೀವೇ ಅಧಿಕಾರ ನಡೆಸಿ' ಎಂದು ಜನ  ಹೇಳುತ್ತಾರೆ ಎಂದು ಮೋದಿ ಹೇಳಿದ್ದಾರೆ.

3.5 ಲಕ್ಷ ಮಂದಿ: ದೇಶಾದ್ಯಂತ 3.5 ಲಕ್ಷ ಮಂದಿ ತಮ್ಮ ಸಬ್ಸಿಡಿ ಸಹಿತ ಎಲ್‍ಪಿಜಿ ಸಂಪರ್ಕವನ್ನು ಸ್ವಯಂಪ್ರೇರಿತವಾಗಿ ನಿರಾಕರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಶ್ರೀಮಂತರು ಯಾಕೆ ಎಲ್‍ಪಿಜಿ ಸಬ್ಸಿಡಿಯನ್ನು ನಿರಾಕರಿಸಲ್ಲ ಎಂದು ನಾನು ಅಂದಿದ್ದೆ. ಇದಾದ ಒಂದೇ ವಾರದಲ್ಲಿ 2 ಲಕ್ಷ ಮಂದಿ ಸ್ವಯಂ ಪ್ರೇರಿತರಾಗಿ ಎಲ್‍ಪಿಜಿ ಸಬ್ಸಿಡಿ ನಿರಾಕರಿಸಿದ್ದಾರೆ. ಗುರುವಾರದವರೆಗೆ ಎಲ್‍ಪಿಜಿ ಸಬ್ಸಿಡಿ ಕೈಬಿಟ್ಟವರ ಸಂಖ್ಯೆ 3.5 ಲಕ್ಷ ತಲುಪಿದೆ. ಈ ಹಣ ಸರ್ಕಾರದ ಖಜಾನೆಗೆ ಹೋಗಲ್ಲ. ಅಡುಗೆಗಾಗಿ ಕಟ್ಟಿಗೆಯಲ್ಲೇ ಅವಲಂಬಿಸಿರುವವರಿಗೆ ಶುದ್ಧ ಇಂಧನ ಪೂರೈಸಲು ಬಳಕೆಯಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ