ಪಾಕ್-ಚೀನಾಗೆ ಸೆಡ್ಡು 
ದೇಶ

ಪಾಕ್-ಚೀನಾಗೆ ಸೆಡ್ಡು

ವಿರೋಧದ ನಡುವೆಯೂ ಪಾಕಿಸ್ತಾನದಲ್ಲಿ ಆರ್ಥಿಕ ಕಾರಿಡಾರ್ ಒಪ್ಪಂದ ಮಾಡಿಕೊಂಡ ಚೀನಾಗೆ ಭಾರತ ಪ್ರತ್ಯುತ್ತರ ನೀಡಿದೆ...

ನವದೆಹಲಿ: ವಿರೋಧದ ನಡುವೆಯೂ ಪಾಕಿಸ್ತಾನದಲ್ಲಿ ಆರ್ಥಿಕ ಕಾರಿಡಾರ್ ಒಪ್ಪಂದ ಮಾಡಿಕೊಂಡ ಚೀನಾಗೆ ಭಾರತ ಪ್ರತ್ಯುತ್ತರ ನೀಡಿದೆ.

ಚೀನಾವು ಪಾಕ್‍ನೊಂದಿಗೆ ಒಪ್ಪಂದ ಮಾಡಿಕೊಂಡರೆ ಅದಕ್ಕೆ ಪ್ರತಿಯಾಗಿ ಇರಾನ್ ಜತೆ ಒಪ್ಪಂದ ಮಾಡಿಕೊಳ್ಳಲು ಭಾರತ ಮುಂದಾಗಿದೆ. ಸದ್ಯದಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇರಾನ್ ಜತೆಗಿನ ಬಂದರು ನಿರ್ಮಾಣ ಒಪ್ಪಂದಕ್ಕೆ ಟೆಹರಾನ್‍ನಲ್ಲಿ ಸಹಿ ಹಾಕಲಿದ್ದಾರೆ.

ಚೀನಾ ಅಭಿವೃದ್ದಿಪಡಿಸಿರುವ ಗ್ವಾದಾರ್ ಬಂದರಿನಿಂದ ಕೇವಲ 72 ಕಿ.ಮೀ. ದೂರದ ಚಬಾಹರ್‍ನಲ್ಲಿ ಇರಾನ್ ಜತೆಗೂಡಿ ಭಾರತ ಬಂದರು ನಿರ್ಮಿಸಲಿದೆ. ಇದರಿಂದ ಅಫ್ಥಾನಿಸ್ತಾ ಮೂಲಕ ಭಾರತಕ್ಕೆ ಸಂಪರ್ಕ ಸಾಧಿಸಲು ಸಾಧ್ಯ. ಚಬಾಹರ್‍ನಿಂದ ಇರಾನ್‍ನ ಮಿಲಕ್‍ಗೆ ರಸ್ತೆ, ರೈಲು ಸಂಪರ್ಕ ಕಲ್ಪಿಸಿ, ಅದನ್ನು ಆಫ್ಘಾನ್ ನಲ್ಲಿರುವ 223 ಕಿ.ಮೀ. ಝರಾಂಜ್-ದೇಲಾರಾಂ ರಸ್ತೆಗೆ ಲಿಂಕ್ ಮಾಡುವುದು ಭಾರತದ ಉದ್ದೇಶ. ಹೀಗೆ ಮಾಡಿದರೆ ಆಫ್ಥಾನ್‍ಗೆ ಸುಲಭವಾಗಿ ಪರಿಹಾರ, ನೆರವು ಒದಗಿಸಬಹುದು. ಜತೆಗೆ ಚಬಾಹರ್ ಬಂದರಿನ ಮೂಲಕ ಭಾರತದ ಸರಕುಗಳಿಗೆ ಮಧ್ಯ ಏಷ್ಯಾದಲ್ಲಿ ಮಾರುಕಟ್ಟೆ ಸಿಗುವಂತೆ ಮಾಡಬಹುದು.

ಭಾರತದ ಪ್ಲ್ಯಾನ್?

  • ಚೀನಾದ ಗ್ವಾದಾರ್ ಒಪ್ಪಂದಕ್ಕೆ ಪ್ರತಿಯಾಗಿ ಭಾರತದ ಬಂದರು.
  • 2003ರಲ್ಲೇ ಇತ್ತು ಚಬಾಹರ್ ಬಂದರು ನಿರ್ಮಾಣ ಪ್ರಸ್ತಾಪ
  • ರು.537 ಕೋಟಿ ವೆಚ್ಚದ ಯೋಜನೆ, 2 ಲಂಗರು ನಿರ್ಮಾಣ
  • ಕಂಟೈನರ್‍ಗಳ ನಿರ್ವಹಣೆಗೆ ಒಂದು, ಬಹೂಪಯೋಗಿ ಸರಕು ಟರ್ಮಿನಲ್ ಮತ್ತೊಂದು
  • ಒಪ್ಪಂದದಂತೆ 10 ವರ್ಷ ಕಾರ್ಯಚಟುವಟಿಕೆಗೆ ಅವಕಾಶ. ಆಫ್ಘನ್‍ನ ಭೂಪ್ರದೇಶ, ಸಮುದ್ರ ಸಂಪರ್ಕದಿಂದ ಪರಿಹಾರ ಹೆಚ್ಚಿಸಲು ಅನುಕೂಲ
  • ಚೀನಾಗೆ ಪ್ರತಿಯಾಗಿ ಮಧ್ಯ ಏಷ್ಯಾದಲ್ಲಿ ವ್ಯಾಪಾರ ವಿಸ್ತರಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಜನತೆಗೆ ಕರೆ-Video

19ನೇ ವಯಸ್ಸಿಗೆ 180 ಅಪ್ರಾಪ್ತ ಬಾಲಕಿಯರ ಜೊತೆ ಸೆಕ್ಸ್; 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊ Viral, ತನ್ವೀರ್ ಅಹ್ಮದ್ ಯಾರು?

'TCSನಲ್ಲಿ ಲವ್ ಜಿಹಾದ್, ಲೈಂಗಿಕ ಕಿರುಕುಳ' ಪ್ರಕರಣ: HR ನಿದಾ ಖಾನ್ 'ಮಾಸ್ಟರ್ ಮೈಂಡ್'; ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ!

ತ್ರಿವರ್ಣ ಧ್ವಜ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ Omar Abdullah, ಗೌರವಯುತವಾಗಿ ಬದಲು! Video

Sri Guru Bhairavaikya Mandir: ಆದಿಚುಂಚನಗಿರಿಯಲ್ಲಿ ಶ್ರೀ ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?-Video

SCROLL FOR NEXT