ಕಠ್ಮಂಡು: ನೇಪಾಳಕ್ಕೆ ಬರುವ ಮತ್ತು ಹೋಗುವ ಎಲ್ಲ ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ನೇಪಾಳದ ವಿಮಾನಯಾನ ಪ್ರಾಧಿಕಾರದ ಸೂಚನೆ ಬರುವವರೆಗೆ ಏರ್‍ಇಂಡಿಯಾ, ಇಂಡಿಗೋ, ಸ್ಪೈಸ್‍ಜೆಟ್ ಸೇರಿದಂತೆ ಭಾರತದ ಎಲ್ಲ ವಿಮಾನಗಳ ಸೇವೆಯೂ ಸ್ಥಗಿತವಾಗಿದೆ.
ಆದರೆ ಕಠ್ಮಂಡು ವಿಮಾನ ನಿಲ್ದಾಣ ತೆರೆಯಲಾಗಿದ್ದು, ಪರಿಹಾರ, ರಕ್ಷಣಾ ಕಾರ್ಯಕ್ಕೆ ತೆರಳುವ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ.