ನೇಪಾಳದಲ್ಲಿ ಸಂಭವಿಸಿದ ಭೂಕಂಪ ದೇಶದ ಉತ್ತರ ಮತ್ತು ಈಶಾನ್ಯ ಭಾರತದಲ್ಲೂ ಅದರ ಪ್ರಭಾವ ಕಂಡುಬಂದಿದೆ. ದುರಂತದಲ್ಲಿ 51 ಮಂದಿ ಅಸು ನೀಗಿ, 237 ಮಂದಿ ಗಾಯಗೊಂಡಿದ್ದಾರೆ. ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹೆಚ್ಚು ಹಾನಿಗೆ ಒಳಗಾದ ರಾಜ್ಯಗಳಾಗಿವೆ.
- ಬಿಹಾರದಲ್ಲಿ 38 ಮಂದಿ ಸಾವಿಗೀಡಾಗಿದ್ದಾರೆ. 12 ಜಿಲ್ಲೆಗಳಲ್ಲಿ ಸಾವು ನೋವಿನ ಘಟನೆ
ಗಳು ವರದಿಯಾಗಿವೆ. 133 ಮಂದಿ ಗಾಯಗೊಂಡಿದ್ದಾರೆ. ಸಿಎಂ ನಿತೀಶ್ ಕುಮಾರ್
ಸಾವಿಗೀಡಾದ ಕುಟುಂಬ ಸದಸ್ಯರಿಗೆ ರು.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
- ಉತ್ತರ ಪ್ರದೇಶದಲ್ಲಿ 12 ಮಂದಿ ಕೊನೆಯುಸಿರೆಳೆದಿದ್ದಾರೆ. ಆರು ಜಿಲ್ಲೆಗಳಲ್ಲಿ
ಭೂಕಂಪನದಿಂದಾಗಿ ಸಾವು ನೋವು, ಆಸ್ತಿ ನಷ್ಟ ಉಂಟಾಗಿದೆ. ಸಿಎಂ ಅಖಿಲೇಶ್
ಯಾದವ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ರು.5
ಲಕ್ಷ, ಗಾಯಗೊಂಡವರಿಗೆ ರು.50 ಸಾವಿರ ಘೋಷಿಸಿದ್ದಾರೆ.
- ಪಶ್ಚಿಮ ಬಂಗಾಳದ ಜಲಪಾಯï ಜಿಲ್ಲೆಯಲ್ಲಿ ವ್ಯಕ್ತಿ ಅಸುನೀಗಿದ್ದಾನೆ. ಮಾಲ್ಡಾ ಜಿಲ್ಲೆಯಲ್ಲಿ
ಶಾಲೆ ಕುಸಿದು ವಿದ್ಯಾರ್ಥಿನಿಗೆ ಗಾಯಗಳಾಗಿವೆ. ಕೋಲ್ಕತಾದಲ್ಲಿ ಜನರು ಭೀತಿಯಿಂದ
ಎತ್ತರದ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.
- ಉಳಿದಂತೆ ದೆಹಲಿ, ಉತ್ತರ ಭಾರತದ ಇತರ ರಾಜ್ಯಗಳು, ಈಶಾನ್ಯ ರಾಜ್ಯಗಳಾದ
ಅಸ್ಸಾಂ, ಮೇಘಾಲಯ, ಮಣಿಪುರ, ಸಿಕ್ಕಿಂ, ಒಡಿಶಾ,ಆಂಧ್ರಪ್ರದೇಶ, ಚೆನ್ನೈ ಮತ್ತು
ಕೊಚ್ಚಿಯಲ್ಲಿ ಕಂಪನದ ಅನುಭವವಾಗಿದೆ.