ಹಿರಿಯ ನಾಗರಿಕರು (ಸಂಗ್ರಹ ಚಿತ್ರ) 
ದೇಶ

2026ರ ಹೊತ್ತಿಗೆ ಭಾರತದಲ್ಲಿ 17 ಕೋಟಿ "ಹಿರಿಯರು"

2026ರ ಹೊತ್ತಿಗೆ ಭಾರತದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 17 ಕೋಟಿ ಮೀರಲಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮಾಹಿತಿ ನೀಡಿದೆ.

ನವದೆಹಲಿ: 2026ರ ಹೊತ್ತಿಗೆ ಭಾರತದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 17 ಕೋಟಿ ಮೀರಲಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮಾಹಿತಿ ನೀಡಿದೆ.

ಲೋಕಸಭಾ ಕಲಾಪದಲ್ಲಿ ಇಂದು ಪ್ರಶ್ನೆಯೊಂದಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ವಿಜಯ್ ಸಂಪ್ಲಾ ಅವರು ಉತ್ತರಿಸಿದರು. "RGI (Registrar General, India) ಕಚೇರಿ ನೀಡಿದ ಮೇ 2006ರ ವರದಿಯನ್ವಯ 2026ರ ವೇಳೆಗೆ ಭಾರತದಲ್ಲಿ ಶೇ.12 ರಷ್ಟು ಅಂದರೆ ಸುಮಾರು 17 ಕೋಟಿಗೂ ಹೆಚ್ಚು ಮಂದಿ ಹಿರಿಯ
ನಾಗರಿಕರು ಇರುತ್ತಾರೆ. ಜನಸಂಖ್ಯಾ ಪ್ರಕ್ಷೇಪಗಳ ಮೇಲಿನ ತಾಂತ್ರಿಕ ಸಮೂಹ ಒದಗಿಸಿದ ವರದಿಯನ್ವಯ 2016ರ ಹೊತ್ತಿಗೆ ಭಾರತದಲ್ಲಿ ಶೇ. 11.81ರಷ್ಟು ಮತ್ತು 2021ರ ವೇಳೆಗೆ 14.31ರಷ್ಟು ಹಿರಿಯ ನಾಗರಿಕರು ಇರುತ್ತಾರೆ ಎಂದು ತಿಳಿದುಬಂದಿದೆ" ಎಂದು ಅವರು ಮಾಹಿತಿ ನೀಡಿದರು.

ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಿದ್ದು, 2001ರಿಂದ 2011ರ ಅವಧಿಯಲ್ಲಿ ಹಿರಿಯ ನಾಗರಿಕರ ಸಂಖ್ಯೆ 7.7 ಕೋಟಿಯಿಂದ 10.38ಕ್ಕೆ
ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

2020ರ ವೇಳೆಗೆ ಭಾರತದಲ್ಲಿ ಅತಿಹೆಚ್ಚು ಯುವಕರಿರುತ್ತಾರೆ. ಆ ಮೂಲಕ ಭಾರತ ದೇಶ ಇಡೀ ವಿಶ್ವದಲ್ಲೇ ಯುವ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು. ಇದೀಗ ಹೊರಬಿದ್ದಿರುವ ಆರ್ ಜಿಐ ನ ಮಾಹಿತಿಯನ್ವಯ ಭಾರತದ ಭವಿಷ್ಯ ನಿರ್ಧರಿಸುವ ಯಂಗ್ ಇಂಡಿಯಾಗೆ ಮಾರ್ಗದರ್ಶನ ಮಾಡಲು ಸೀನಿಯರ್ ಇಂಡಿಯಾ ಕೂಡ ರೆಡಿಯಾಗುತ್ತಿದೆ ಅಂತಾಯ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಮಂಗಳಾರತಿ!

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

IPL 2026: ಅಭಿಷೇಕ್, ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್; KKR ವಿರುದ್ಧ SRH ಭರ್ಜರಿ ಗೆಲುವು

ಪಶ್ಚಿಮ ಏಷ್ಯಾ ಯುದ್ಧದ ಪರಿಸ್ಥಿತಿ ನಿರ್ವಹಣೆ: ಮೋದಿ ಸರ್ಕಾರವನ್ನು ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ; ಪಕ್ಷಕ್ಕೆ ತೀವ್ರ ಮುಜುಗರ!

"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

SCROLL FOR NEXT