ಗೋಮಾಂಸ ಆಹಾರ 
ದೇಶ

ನೇಪಾಳ ಸಂತ್ರಸ್ತರಿಗೆ ಗೋಮಾಂಸದ ಆಹಾರ ಪೂರೈಸಿದ ಪಾಕಿಸ್ತಾನ

ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ನೆರವಿನ ಅಸ್ತ ಚಾಚಿವೆ. ಆದರೆ ಪಾಕಿಸ್ತಾನ ಮಾತ್ರ ನೇಪಾಳ...

ಕಠ್ಮಂಡು: ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ನೆರವಿನ ಅಸ್ತ ಚಾಚಿವೆ. ಆದರೆ ಪಾಕಿಸ್ತಾನ ಮಾತ್ರ ನೇಪಾಳ ಸಂತ್ರಸ್ತರ ಜೊತೆಗೆ ಕೀಳು ಮಟ್ಟದ ಬುದ್ದಿಯನ್ನು ಪ್ರದರ್ಶಿಸಿದ್ದು, ಗೋಮಾಂಸ ಆಹಾರವನ್ನು ಕಳುಹಿಸಿಕೊಟ್ಟಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಪ್ರಬಲ ಭೂಕಂಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ನೇಪಾಳಿಗರಿಗೆ ಪಾಕಿಸ್ತಾನ ನೆರವಿನ ನೆಪದಲ್ಲಿ ಗೋಮಾಂಸದ ಆಹಾರವನ್ನು ರವಾನೆ ಮಾಡಿದೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತಲೇ ಕರೆಯಲ್ಪಡುವ ನೇಪಾಳದಲ್ಲಿ ಗೋಮಾಂಸವನ್ನು ತಿನ್ನುವುದಿಲ್ಲ ಬದಲಾಗಿ ಗೋವನ್ನು ಪೂಜಿಸುತ್ತಾರೆ.

ಭೂಕಂಪದಿಂದ ಆಹಾರ ಸಿಗದೇ ಹಸಿದಿದ್ದರೂ ಸಂತ್ರಸ್ಥರು ಪಾಕಿಸ್ತಾನದ ಆಹಾರವನ್ನು ಮುಟ್ಟಿಲ್ಲ. ಜೊತೆಗೆ ಪಾಕಿಸ್ತಾನದ ಹುಚ್ಚಾಟವನ್ನು ಅಲ್ಲಿನ ಪ್ರಧಾನಿಗೆ ಅಧಿಕಾರಿಗಳು ವರದಿ ಮಾಡಿದ್ದು ಪಾಕ್  ಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಮುಂದಾಗಿದೆ.

ಇದೇ ವೇಳೆ ಭಾರತದಿಂದ ಸಂತ್ರಸ್ಥರ ನೆರವಿಗೆ ತೆರಳಿರುವ ವೈದ್ಯರು ಸಹ ಪಾಕಿಸ್ತಾನದ ಆಹಾರವನ್ನು ತಿರಸ್ಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!