ಅಲಿಪುರದ್ವಾರ್: ಮದುವೆ ವಾಹನ ಮೆಟಾಡೋರ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವಧು-ವರ ಸೇರಿದಂತೆ 15 ಮಂದಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮದಾರಿಹಟ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಭೀಕರ ಅಪಘಾತದಲ್ಲಿ ನೂತನ ವಧು-ವರರೂ ಸೇರಿದಂತೆ ಮದುವೆ ದಿಬ್ಬಣದ 12 ಜನ ಮೃತಪಟ್ಟು , ಇತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಮದುವೆ ಮಹೋತ್ಸವ ಮುಗಿಸಿಕೊಂಡು, ವಧು-ವರ ಸೇರಿ 18 ಜನರು ಮೆಟಾಡೋರ್‌ನಲ್ಲಿ ಇಂದು ಬೆಳಗ್ಗೆ ಬೀರ್‌ಪಾರ್‌ನಿಂದ ತಮ್ಮೂರಿಗೆ ತೆರಳುತ್ತಿದ್ದರು. ಎದುರಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ವಧು-ವರ ಸಹಿತ 15 ಜನರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ಮೇಘಾರಿಯ ತಿಳಿಸಿದ್ದಾರೆ.