ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ (ಸಂಗ್ರಹ ಚಿತ್ರ) 
ದೇಶ

ಸಂಸತ್ತಿನಲ್ಲೂ 1-2 ಉಗ್ರರಿದ್ದಾರೆ: ಮತ್ತೊಂದು ವಿವಾದದಲ್ಲಿ ಸಾಧ್ವಿ ಪ್ರಾಚಿ

ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಸಂಸತ್ತಿನಲ್ಲಿ 1-2 ಉಗ್ರರಿದ್ದಾರೆಂದು ಗುರುವಾರ ಹೇಳಿದ್ದಾರೆ...

ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಸಂಸತ್ತಿನಲ್ಲಿ 1-2 ಉಗ್ರರಿದ್ದಾರೆಂದು ಗುರುವಾರ ಹೇಳಿದ್ದಾರೆ.

1993 ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮನ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದರ ಕುರಿತಂತೆ ಇಂದು ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿರುವವರೇ ಅದರಲ್ಲೂ ಸಂಸತ್ತಿನಲ್ಲಿ ಕುಳಿತಿರುವ ನಾಯಕರು ಓರ್ವ ಉಗ್ರನಿಗೆ ಗಲ್ಲು ಶಿಕ್ಷೆ ನೀಡಿರುವುದನ್ನು ತಪ್ಪು ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೊಂದಿಲ್ಲ.

ಆತನೊಬ್ಬ ಉಗ್ರ ನೂರಾರು ಜನರನ್ನು ಕೊಂದಿದ್ದಾನೆಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆದರೂ, ಆತನಿಗೆ ನಮ್ಮ ನಾಯಕರು ಬೆಂಬಲ ಸೂಚಿಸುತ್ತಿದ್ದಾರೆ. ಒಬ್ಬ ಉಗ್ರನಿಗೆ ಬೆಂಬಲ ಸೂಚಿಸುವವನೂ ಕೂಡ ಒಬ್ಬ ಉಗ್ರನೇ ಹಾಗಾಗಿ ಸಂಸತ್ತಿನಲ್ಲಿ 1-2 ಉಗ್ರರು ಕುಳಿತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಉಧಂಪುರದಲ್ಲಿ ಬಂಧಿತನಾದ ಉಗ್ರ ಉಸ್ಮನ್ ಕುರಿತಂತೆ ಭದ್ರತಾ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿರುವ ಅವರು, ವಿಚಾರಣೆ ನಡೆಸಿ ಮಾಹಿತಿ ಪಡೆದ ಬಳಿಕ ಉಗ್ರ ಉಸ್ಮನ್ ನನ್ನು ಹಿಂದು ಸಂಘಟನೆಗಳ ಕೈಗೆ ಕೊಡಿ ಸಂಘಟನೆಗಳು ಸಾರ್ವಜನಿಕವಾಗಿ ಆತನಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel