ನವದೆಹಲಿ: ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿಗೆ ಸಹಾಯ ಮಾಡಿದ ಆರೋಪಕ್ಕೆ ತುತ್ತಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ವಾಗ್ಧಾಳಿ ನಡೆಸಿದ್ದಾರೆ.
ಸುಷ್ಮಾ ಬಹಳ ಚೆನ್ನಾಗಿ ನಾಟಕ ಮಾಡುತ್ತಾರೆ. ನಿನ್ನೆ ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಇಲ್ಲಸಲ್ಲದ ಕಾರಣಗಳನ್ನು ನೀಡಿ ನಾಟಕವಾಡಿದ್ದಾರೆ. ಈ ಮೂಲಕ ನಾಟಕ ಮಾಡುವುದರಲ್ಲಿ ಪರಿಣಿತೆಯಾಗಿದ್ದಾರೆ ಎಂದು ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ.
ಅಲ್ಲದೇ, ಸಂಸತ್ ನಲ್ಲಿ ಸುಷ್ಮಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸೋನಿಯಾ, ಲೋಕಸಭೆಯಲ್ಲಿ ಯಾವುದೋ ಒಂದು ಕಾರಣ ನೀಡಬೆಕು ಎಂದು ಈ ರೀತಿ ನಾಟಕವಾಡಿದ್ದಾರೆ. ಸಂಸತ್ ಗದ್ದಲ ಅಂತ್ಯಗೊಳ್ಳಲಿ ಎಂಬ ಉದ್ದೇಶದಿಂದ ಸೋನಿಯಾ ಏನು ಮಾಡುತ್ತಿದ್ದರೂ ಎಂಬ ಪ್ರಶ್ನೆ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ ಸಂದರ್ಭದಲ್ಲಿ ನನ್ನ ಸ್ಥಾನದಲ್ಲಿ ಸೋನಿಯಾ ಗಾಂಧಿ ಇದ್ದಿದ್ದರೆ ಏನು ಮಾಡ್ತಾ ಇದ್ರು? ಎಂದು ಪ್ರಶ್ನಿಸಿದ್ದರು.