ನಾವೇದ್ 
ದೇಶ

ಕಸಬ್‍ಗೂ ನಾವೇದ್‍ಗೂ ಒಂದೇ ಕ್ಯಾಂಪಲ್ಲಿ ತರಬೇತಿ

ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಕಸಬ್‍ಗೂಉಧಾಂಪುರದಲ್ಲಿ ಇತ್ತೀಚೆಗೆ ಸೆರೆ ಸಿಕ್ಕ ಉಗ್ರ ನಾವೇದ್ ಯಾಕೂಬ್‍ಗೂ ತರಬೇತಿ ನೀಡಿದ್ದು ...

ನವದೆಹಲಿ: ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಕಸಬ್‍ಗೂ ಉಧಾಂಪುರದಲ್ಲಿ ಇತ್ತೀಚೆಗೆ ಸೆರೆ ಸಿಕ್ಕ ಉಗ್ರ ನಾವೇದ್ ಯಾಕೂಬ್‍ಗೂ ತರಬೇತಿ ನೀಡಿದ್ದು ಒಂದೇ ಕ್ಯಾಂಪ್‍ನಲ್ಲಿ! ಹೌದು, ಈ ವಿಚಾರವನ್ನು ಸ್ವತಃ ನಾವೇದ್‍ನೇ ಬಹಿರಂಗಪಡಿಸಿದ್ದಾನೆ. ಮುಂಬೈ ದಾಳಿ ಬಳಿಕ ಲಷ್ಕರ್-ಎ- ತೊಯ್ಬಾ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ಪಾಕ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದಕ್ಕೆ ಇದು ಮತ್ತೊಂದು
ಉದಾಹರಣೆ. ಕಸಬ್‍ಗೆ ತರಬೇತಿ ನೀಡಲಾಗಿದ್ದ ಲಷ್ಕರ್-ಎ- ತೊಯ್ಬಾದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮನ್ಸ್‍ಹೆರ್ರಾದಲ್ಲಿರುವ ಮರ್ಕಜ್ ತೈಬಾ ಕ್ಯಾಂಪ್ ಈಗಲೂ ಅಸ್ತಿತ್ವದಲ್ಲಿದೆ ಎನ್ನುವುದು ಈ ಮೂಲಕ ಬಹಿರಂಗವಾಗಿದೆ ಎಂದು ``ಇಂಡಿಯನ್ ಎಕ್ಸ್‍ಪ್ರೆಸ್'' ವರದಿ ಮಾಡಿದೆ ಖ್ವಾಸಿಂ ಖಾನ್ ಎನ್ನುವ ಕೋಡ್‍ನೇಮ್ ನಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್‍ನ ದಕ್ಷಿಣ ಕಾಶ್ಮೀರದ ಕಮಾಂಡರ್ ಕೈಕೆಳಗೆ ಕೆಲಸ ಮಾಡುವಂತೆ ನಾವೇದ್‍ಗೆ ಸೂಚಿಸಲಾಗಿತ್ತು. ನಾವೇದ್ ಈ ಹಿಂದೆ ಯಾವುದೇ ಉಗ್ರ ದಾಳಿಯಲ್ಲಿ ಪಾಲ್ಗೊಂಡಿರಲಿಕ್ಕಿಲ್ಲ. ಆತ ಈ ಹಿಂದೆ ದಾಳಿಯಲ್ಲಿ ಪಾಲ್ಗೊಂಡಿದ್ದ ಎನ್ನುವುದಕ್ಕೆ ನಮ್ಮ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಕೆ. ರಾಜೇಂದ್ರ ಹೇಳಿದ್ದಾರೆ. ಗುಂಡು ಹಾರಾಟ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶುಕ್ರವಾರ ಬೆಳಗ್ಗೆ ಮತ್ತೆ ಪಾಕಿಸ್ತಾನ ಸೇನೆ ಬಿಎಸ್‍ಎಫ್ ಯೋಧರು ಹಾಗೂ ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ. ಇದೇ ವೇಳೆ ಪುಲ್ವಾಮಾದಲ್ಲಿ ಗುರುವಾರ ರಾತ್ರಿ ನಡೆದ ಎನ್‍ಕೌಂಟರ್ ಬಳಿಕ ಬದುಕುಳಿದಿದ್ದ ಒಬ್ಬ ಲಷ್ಕರ್-ಎ- ತೊಯ್ಬಾ ಪರಾರಿಯಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!