ದೇಶ

ಸುಷ್ಮಾ ಸ್ವರಾಜ್ ಕುಟುಂಬಕ್ಕೆ ಲಲಿತ್ ಮೋದಿ 12 ಕೋಟಿ ಕೊಟ್ಟಿದ್ದಾರೆ: ರಾಹುಲ್

Lingaraj Badiger

ನವದೆಹಲಿ: ಕಡೆಗೂ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಿದ ಕಾಂಗ್ರೆಸ್, ಈ ಸಂಬಂಧ ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ತನಗೆ ನೆರವು ನೀಡಿದ ಸುಷ್ಮಾ ಸ್ವರಾಜ್ ಅವರ ಕುಟುಂಬಕ್ಕೆ ಲಲಿತ್ ಮೋದಿ ಅವರು 12 ಕೋಟಿ ರುಪಾಯಿ ನೀಡಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಗಂಭೀರ ಆರೋಪ ಮಾಡಿದ್ದಾರೆ.

ಲೋಕಸಭೆಯಲ್ಲಿ ಲಲಿತ್ ಮೋದಿ ವಿವಾದದ ಕುರಿತು ಮಾತನಾಡಿದ ರಾಹುಲ್, ಜಗತ್ತಿನಲ್ಲಿ ಸಾಕಷ್ಟು ಜನ ಮಾನವೀಯ ನೆಲೆಯಲ್ಲಿ ಸಹಾಯ ಮಾಡುತ್ತಾರೆ. ಆದರೆ ಕದ್ದು ಮುಚ್ಚಿ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದು ಇದೇ ಮೊದಲು. ನನಗೆ ಸುಷ್ಮಾ ಸ್ವರಾಜ್ ಅವರ ಬಗ್ಗೆ ದ್ವೇಷ ಇಲ್ಲ. ಆದರೆ ಕದ್ದು ಮುಚ್ಚಿ ಮಾನವೀಯ ನೆಲೆಯಲ್ಲಿ ಲಲಿತ್ ಮೋದಿಗೆ ನೆರವು ನೀಡಿದ್ದು ಏಕೆ? ಎಂದು ಪ್ರಶ್ನಿಸಿದರು.

ನಿನ್ನೆ ಸುಷ್ಮಾಜಿ ಅವರು ನನ್ನ ಕೈ ಹಿಡಿದು ಕೇಳಿದರು; ನಿನಗೆ ನನ್ನ ಮೇಲೆ ಏಕೆ ಸಿಟ್ಚು ಅಂತ. ನನಗೆ ಅವರ ಮೇಲೆ ಸಿಟ್ಟಿಲ್ಲ. ನಾನು ಅವರನ್ನು ಗೌರವಿಸುತ್ತೇನೆ. ಆದರೆ ಲಲಿತ್ ಮೋದಿ ಪ್ರಕರಣದಲ್ಲಿ ಸತ್ಯವನ್ನು ಹೇಳುತ್ತಿದ್ದೇನೆ ಎಂದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್, ಲಲಿತ್ ಮೋದಿಗೆ ನೆರವು ನೀಡಿದ್ದಕ್ಕಾಗಿ ಸುಷ್ಮಾ ಸ್ವರಾಜ್ ಕುಟುಂಬಕ್ಕೆ 12 ಕೋಟಿ ರುಪಾಯಿ ಸಂದಾಯವಾಗಿದೆ. ಈ ಬಗ್ಗೆ ಅವರಿಗೆ ಗೊತ್ತಿದೆಯೇ? ಪ್ರಧಾನಿ ಏಕೆ ಸದನಕ್ಕೆ ಗೈರು ಆಗುತ್ತಿದ್ದಾರೆ. ಸದನಕ್ಕೆ ಬರಲು ಅವರಿಗೆ ಧೈರ್ಯವಿಲ್ಲವೇ? ಎಂದು ಪ್ರಶ್ನಿಸಿದರು.

SCROLL FOR NEXT