ಉಗ್ರ ಅಪ್ಜಲ್ ಕಸಬ್ ಮತ್ತು ನ್ಯಾ. ಎಂ.ಎಲ್ ತಹಿಲ್ಯಾನಿ 
ದೇಶ

ಪಾಕ್ ಉಗ್ರ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದ ಜಡ್ಜ್ ಇಂದು ನಿವೃತ್ತಿ

26/11ಮುಂಬಯಿ ದಾಳಿಯ ರೂವಾರಿ ಮಹಮದ್ ಅಪ್ಜಲ್ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ಎಲ್ ತಹಿಲ್ಯಾನಿ ....

ಮುಂಬಯಿ: 26/11ಮುಂಬಯಿ ದಾಳಿಯ ರೂವಾರಿ ಮಹಮದ್ ಅಪ್ಜಲ್ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ಎಲ್ ತಹಿಲ್ಯಾನಿ ಇಂದು ನಿವೃತ್ತಿಯಾಗಲಿದ್ದಾರೆ.

28 ವರ್ಷಗಳ ನ್ಯಾಯಾಂಗ ಸೇವೆಯಲ್ಲಿ ತಹಿಲ್ಯಾನಿ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿ  ಸ್ಥಾನದಿಂದ ನಿವೃತ್ತಿಯಾದ ಬಳಿಕ ಆಗಸ್ಟ್ 24 ರಂದು ಮಹಾರಾಷ್ಟ್ರದ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬಾಲಿವುಡ್ ಸಂಗೀತ ನಿರ್ದೇಶಕ ಗುಲ್ಷನ್ ಕುಮಾರ್ ಹತ್ಯೆ, ಟ್ರೇಡ್ ಯೂನಿಯನ್ ಮುಖ್ಯಸ್ಥ ಎಂಪಿ ದತ್ತ ಸಮಂತ್ ಕೊಲೆ ಪ್ರಕರಣ  ಹಾಗೂ 2009ರ ಮುಂಬಯಿ ದಾಳಿ ರೂವಾರಿ ಅಪ್ಜಲ್ ಕಸಬ್ ಪ್ರಕರಣ ಸೇರಿದಂತೆ ಹಲವು ಸಂವೇದನಾ ಶೀಲ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದ್ದರು.

1987 ರಲ್ಲಿ ಬಾಂದ್ರಾ ಮೆಟ್ರೊ ಪಾಲಿಟನ್ ಮ್ಯಾಜಿಸ್ರ್ಟೇಟ್ ಕೋರ್ಟ್ ನ್ಯಾಯಮೂರ್ತಿಗಳಾಗಿ ವೃತ್ತಿ ಆರಂಭಿಸಿದ ತಹಿಲ್ಯಾನಿ 1997 ರಲ್ಲಿ ಮುಂಬಯಿ ಮುಂಬಯಿ ಸೆಷನ್ ಕೋರ್ಟ್ ನ ಜಡ್ಜ್ ಆಗಿ ನೇಮಕಗೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಹಾರ್ಮುಜ್ ಬಿಕ್ಕಟ್ಟು ತೀವ್ರ; ನಾವಿಕರನ್ನು ಕಳೆದುಕೊಂಡ ಏಕೈಕ ದೇಶ ಭಾರತ, ನಿರ್ಬಂಧ ರಹಿತ ಸಂಚಾರಕ್ಕೆ ಒತ್ತಾಯ..!

ಇರಾನ್‌ ಯುದ್ಧದ ನಡುವೆ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆ: ಸೇನಾ ಮುಖ್ಯಸ್ಥರನ್ನು ಕಿತ್ತೆಸೆದ ಟ್ರಂಪ್ ಆಡಳಿತ!

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

'ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್' ಮಾಡ್ತಿದೆ- ಲಲಿತ್ ಮೋದಿ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

SCROLL FOR NEXT