ಬಿಡಿ ಸಿಗರೇಟು ಮಾರಾಟ 
ದೇಶ

ಭಾರತದಲ್ಲಿ ಶೇ.75 ರಷ್ಟು ಬಿಡಿ ಸಿಗರೇಟು ಮಾರಾಟ

ಭಾರತದಲ್ಲಿ ಶೇ.75 ರಷ್ಟು ಬಿಡಿ ಸಿಗರೇಟುಗಳು ಮಾರಾಟವಾಗುತ್ತಿದೆ.

ಶಿಮ್ಲಾ: ಭಾರತದಲ್ಲಿ ಶೇ.75 ರಷ್ಟು ಬಿಡಿ ಸಿಗರೇಟುಗಳು ಮಾರಾಟವಾಗುತ್ತಿದೆ. ಭಾರತದ 5 ಬಿಲಿಯನ್ ಡಾಲರ್ ಮಾರುಕಟ್ಟೆಯಲ್ಲಿ ಶೇ.30 ರಷ್ಟು ಮೌಲ್ಯದ ಬಿಡಿ ಸಿಗರೇಟು ಮಾರಾಟ ನಡೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಪತ್ರಿಕೆ ಹೇಳಿದೆ.

ಬಿಡಿ ಸಿಗರೇಟುಗಳ ಮಾರಾಟ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಉತ್ತಮವಾದದ್ದಲ್ಲ ಎಂದು ಪತ್ರಿಕೆ ನಡೆಸಿರುವ ಅಧ್ಯಯನ ತಿಳಿಸಿದೆ. ಭಾರತದ 10 ಪ್ರಮುಖ ಪ್ರದೇಶಗಳಲ್ಲಿ ಸಿಗರೇಟು ಮಾರಾಟದ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಶೇ.75 ರಷ್ಟು  ಬಿಡಿ ಸಿಗರೇಟುಗಳೇ ಮಾರಾಟವಾಗುವುದು ಎಂಬ ಅಂಶ ಕ್ಯಾನ್ಸರ್ ನ ತಡೆಗಟ್ಟುವ ನಿಟ್ಟಿನಲ್ಲಿ ಪ್ರಕಟವಾಗುತ್ತಿರುವ ಏಷ್ಯನ್ ಪೆಸಿಫಿಕ್ ಜರ್ನಲ್ ನಿಂದ ಬಯಲಾಗಿದೆ.

ಅಗರ್ತಲಾ, ಬರೋಡ, ಚೆನೈ, ದೆಹಲಿ, ಗೋವಾ, ಇಂಡೋರ್, ಜೈಪುರ, ಜೋರ್ಹತ್, ಪಾಟ್ನಾ ಮತ್ತು ಶಿಮ್ಲಾಗಳಲ್ಲಿ ಸಿಗರೇಟು ಮಾರಾಟದ ಬಗ್ಗೆ  ಅಧ್ಯಯನ ನಡೆಸಲಾಗಿದೆ. ಬಿಡಿ ಸಿಗರೇಟು ಮಾರಾಟವನ್ನು ಭಾರತ ಸರ್ಕಾರ ನಿಷೇಧಿಸಬೇಕು ಎಂದು ಅಧ್ಯಯನದ ವರದಿಯಲ್ಲಿ ಸಲಹೆ ನೀಡಲಾಗಿದೆ. ಈಗಲೂ ಬಿಡಿ ಸಿಗರೇಟುಗಳ ಮಾರಾಟದ ಮೇಲೆ ನಿಷೇಧವಿದೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ ಎಂಬುದು ಗಮನಾರ್ಹ ಅಂಶ.

ಭಾರತದ ತಂಬಾಕು ನಿಯಂತ್ರಣ ಕಾನೂನಿನ ಪ್ರಕಾರ  ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತವಾದ ಆರೋಗ್ಯ ಎಚ್ಚರಿಕೆ ನೀಡುವುದು ಕಡ್ಡಾಯವಾಗಿದೆ. ಆದರೆ ಬಿಡು ಸಿಗರೇಟುಗಳ ಮಾರಾಟ ಈ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಸಹ ಸಂಶೋಧಕ ರವೀಂದ್ರ ಕುಮಾರ್ ಹೇಳಿದ್ದಾರೆ. ಬಿಡಿ ಸಿಗರೇಟು ಮಾರಾಟದಿಂದ ತಂಬಾಕು ಕಂಪನಿಗಳಿಗೆ ಲಾಭವಾಗುತ್ತದೆ. ಆದರೆ ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದ್ದಲ್ಲ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT