ಮುಂಬೈ: ಸಹೋದರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ
2012ರಲ್ಲಿ ಇಂದ್ರಾಣಿ ಅವರ ಸಹೋದರಿ ಶೀನಾ ಬೋರಾ ಹತ್ಯೆಗೀಡಾಗಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈ ವರೆಗೂ ಯಾವುದೇ ಮಾಹಿತಿಗಳು ಸಿಕ್ಕಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆ ಅನುಮಾನ ಬಂದ ಕಾರಣ ಇಂದ್ರಾಣಿ ಅವರ ಕಾರು ಚಾಲಕನನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಕಾರು ಚಾಲಕ ಇಂದ್ರಾಣಿ ಅವರೇ ಸಹೋದರಿ ಶೀನಾ ಬೋರಾ ಅವರನ್ನು ಕೊಲೆ ಮಾಡಿದ್ದರು. ಶೀನಾ ಅವರ ದೇಹವನ್ನು ಮುಚ್ಚಿಡುವ ಸಲುವಾಗಿ ನನ್ನ ಸಹಾಯ ಕೇಳಿದರು. ನಂತರ ಇಬ್ಬರು ಸೇರಿ ಶೀನಾ ಅವರ ದೇಹವನ್ನು ರಾಯ್‌ಘಡದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹೂತಿಡಲಾಯಿತು ಎಂದು ಹೇಳಿದ್ದ.
ಕಾರು ಚಾಲಕ ನೀಡಿದ ಮಾಹಿತಿ ಆಧಾರದ ಮೇಲೆ ಇದೀಗ ಇಂದ್ರಾಣಿ ಮುಖರ್ಜಿ ಅವರನ್ನು ಮುಂಬೈನ ಖಾರ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆ.31ರವರೆಗೆ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.