ಉತ್ತರ ಪ್ರದೇಶದಲ್ಲಿ ಬ್ಯಾಂಕ್ ಅಧಿಕಾರಿಗೆ ರೂ.50 ಸಾವಿರ ವಂಚನೆ
ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ ಎಂದು ಹೇಳಿ ಬ್ಯಾಂಕ್ ಅಧಿಕಾರಿಗೆ ಇಲ್ಲೊಬ್ಬ ವಂಚನೆ ಮಾಡಿದ್ದಾನೆ.
ರಾಮಪುರ: ಬ್ಯಾಂಕ್ ತನ್ನ ಗ್ರಾಹಕರ ಡೆಬಿಟ್ ಕಾರ್ಡ್ ನ ಪಿನ್ ಸಂಖ್ಯೆ ಕೇಳುವುದಿಲ್ಲ, ಕೇಳಿದರೆ ಅಂತಹವರ ವಿರುದ್ಧ ದೂರು ನೀಡಿ ಎಂಬ ಎಚ್ಚರಿಕೆ ಸಂದೇಶಗಳನ್ನು ಬ್ಯಾಂಕ್ ಗಳಲ್ಲಿ ನೋಡಿರುತ್ತಿರಿ. ಇಂತಹ ಎಚ್ಚರಿಕೆ ಸಂದೇಶ ನೀಡುವ ಬ್ಯಾಂಕ್ ಅಧಿಕಾರಿಗೆ ಇಲ್ಲೊಬ್ಬ ವಂಚನೆ ಮಾಡಿದ್ದಾನೆ.
ಉತ್ತರಪ್ರದೇಶದಲ್ಲಿರುವ ಬ್ಯಾಂಕ್ ನ ಅಧಿಕಾರಿಯೊಬ್ಬರು 50 ಸಾವಿರ ರೂಪಾಯಿ ವಂಚನೆಗೊಳಗಾಗಿದ್ದಾರೆ. ಕುಮುದಿನಿ ಶ್ರೀವಾಸ್ತವ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿ ಅವರ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ, ಅದನ್ನು ಸರಿಪಡಿಸುವುದಕ್ಕೆ ಮುಂಬೈ ಕಚೇರಿಗೆ ಡೆಬಿಟ್ ಕಾರ್ಡ್ ನ ವಿವರಗಳು ಬೇಕಾಗಿದೆ ಎಂದು ಹೇಳಿದ್ದಾನೆ, ನಂತರ ತಮ್ಮ ಡೆಬಿಟ್ ಕಾರ್ಡ್ ನ ಗೌಪ್ಯ ಸಂಖ್ಯೆ ಹಾಗು ಇನ್ನಿತರ ಮಾಹಿತಿ ನೀಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ತಮ್ಮ ಖಾತೆಯಿಂದ 50 ಸಾವಿರ ರೂಪಾಯಿ ಕಣ್ಮರೆಯಾಗಿದೆ. ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.