ನವದೆಹಲಿ: ನೇತಾಜಿ ಸುಭಾಶ್ಚಂದ್ರ ಬೋಸ್‍ರಿಗೆ ಸಂಬಂಧಿಸಿದ 33 ರಹಸ್ಯ ಕಡತಗಳನ್ನು ಪ್ರಧಾನಿ ಕಚೇರಿಯಿಂದ ರಾಷ್ಟ್ರೀಯ ದಾಖಲೆಗಳಿಗೆ ಒಪ್ಪಿಸಲಾಗಿದೆ.
ಇದು ಈ ಕಡತಗಳನ್ನು ಬಹಿರಂಗಪಡಿಸು ವಲ್ಲಿ ಮೊದಲ ಹೆಜ್ಜೆಯಾಗಿದೆ. ಕಡತಗಳನ್ನು ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಷ್ಟ್ರೀಯ ದಾಖಲೆಗಳ ಮಹಾನಿರ್ದೇಶಕರಿಗೆ ಒಪ್ಪಿಸಿದರು.
ಭಾರತೀಯ ರಾಷ್ಟ್ರೀಯ ದಾಖಲೆಗಳ ಸಂಸ್ಥೆ ಇವನ್ನು ಸಂಸ್ಕರಿಸುವ, ರಕ್ಷಿಸುವ ಮತ್ತು ಡಿಜಿಟಲೀಕರಣಗೊಳಿಸುವ ಕೆಲಸ ಮಾಡಲಿದೆ. ಅಂತಿಮ ಹಂತದಲ್ಲಿ 58 ರಹಸ್ಯ ಕಡತಗಳು ಬಹಿರಂಗಗೊಳ್ಳಲಿದ್ದು, ಈಗ 33 ಕಡತಗಳು ಕೊಡಲ್ಪಟ್ಟಿವೆ.
ನೇತಾಜಿ ಜನ್ಮದಿನ ಜ.23ರಂದು ಕಡತಗಳನ್ನು ಬಹಿರಂಗಪಡಿಸಲಾಗುತ್ತದೆಂದು ಪ್ರಧಾನಿ ಮೋದಿ ಅ.14ರಂದು ಪ್ರಕಟಿಸಿದ್ದರು.