ಹಳಿ ತಪ್ಪಿದ ಕತಿಹಾರ್ ರೈಲು (ಸಂಗ್ರಹ ಚಿತ್ರ) 
ದೇಶ

ಹಳಿ ತಪ್ಪಿದ ಅಮ್ರಪಾಲಿ ಎಕ್ಸ್ ಪ್ರೆಸ್; ಪ್ರಯಾಣಿಕರು ಸುರಕ್ಷಿತ

ಅಮೃತಸರಕ್ಕೆ ಸಾಗುತ್ತಿದ್ದ ಅಮ್ರಪಾಲಿ ಎಕ್ಸ್​ಪ್ರೆಸ್ ರೈಲು ಬಿಹಾರದಲ್ಲಿ ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ...

ಪಾಟ್ನಾ: ಅಮೃತಸರಕ್ಕೆ ಸಾಗುತ್ತಿದ್ದ ಅಮ್ರಪಾಲಿ ಎಕ್ಸ್​ಪ್ರೆಸ್ ರೈಲು ಬಿಹಾರದಲ್ಲಿ ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಕತಿಹಾರ್​ನಿಂದ ಅಮೃತಸರಕ್ಕೆ ಸಾಗುತ್ತಿದ್ದ ರೈಲು ಸಂಖ್ಯೆ 15707 ಅಮ್ರಪಾಲಿ ಎಕ್ಸ್​ಪ್ರೆಸ್ ರೈಲಿನ ಒಟ್ಟು ಏಳು ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರು  ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕತಿಹಾರ್ ಎಕ್ಸ್ ಪ್ರೆಸ್ ರೈಲು ಬಿಹಾರದ ಖಗಾರಿಯಾ ಬಳಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ  ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದ್ದಾರೆ.

ಮುಂಜಾನೆ ಎಲ್ಲರೂ ನಿದ್ದೆಗೆ ಜಾರಿದ್ಧ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಳಿ ತಪ್ಪಿದ ಬೋಗಿಗಳ ಪೈಕಿ ಐದು ಸ್ಲೀಪರ್ ಕೋಚ್, ಎರಡು ಎಸಿ ಕೋಚ್​ಗಳಾಗಿವೆ ಎಂದು ತಿಳಿದು ಬಂದಿದೆ. ಬೆಳಗ್ಗೆ ಕೆಲವು ರೈಲುಗಳ  ಮಾರ್ಗವನ್ನು ಬದಲಿಸಲಾಗಿತ್ತು. ಎಲ್ಲಾ ಬೋಗಿಗಳನ್ನು ಹಳಿಯಿಂದ ತೆರವುಗೊಳಿಸಿ ಉಳಿದ ರೈಲುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಕ್ಸೇನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT