ನವದೆಹಲಿ: ಈ ವರ್ಷ ಅಕ್ಟೋಬರ್ ತಿಂಗಳವರೆಗೆ ದೇಶದಲ್ಲಿ 650 ಕೋಮುಗಲಭೆಗಳ ನಡೆದಿವೆ ಎಂದು ಮಂಗಳವಾರ ಲೋಕಸಭೆಯಲ್ಲಿ ಹೇಳಲಾಗಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ಅವರು 2013ರಲ್ಲಿ 823 ಮತ್ತು 2014ರಲ್ಲಿ 644 ಕೋಮುಗಲಭೆಗಳು ನಡೆದಿದೆ. ಅದೇ ವೇಳೆ ಈ ವರ್ಷ ಜನವರಿಯಿಂದ ಅಕ್ಟೋಬರ್ ತಿಂಗಳವರೆಗೆ 650 ಕೋಮುಗಲಭೆ ಪ್ರಕರಣಗಳು ವರದಿಯಾಗಿದೆ ಎಂದಿದ್ದಾರೆ.
ಆದಾಗ್ಯೂ, ಇಂಥಾ ಪ್ರಕರಣಗಳ ತನಿಖೆ, ವಿಚಾರಣೆ ಮತ್ತು ಕಾನೂನು ಕ್ರಮಗಳ ಹೊಣೆ ಆಯಾ ರಾಜ್ಯ ಸರ್ಕಾರದ್ದಾಗಿರುತ್ತದೆ ಎಂದು ರಿಜ್ಜು ಹೇಳಿದ್ದಾರೆ.
ಅದೇ ವೇಳೆ ಇಂಥಾ ಪ್ರಕರಣಗಳನ್ನು ತಪ್ಪಿಸಲು ರಾಜ್ಯ ಸರ್ಕಾರಗಳು ಸಹಾಯ ಕೇಳಿದರೆ ಕೇಂದ್ರ ಸರ್ಕಾರವು ಮಾಹಿತಿ ಹಂಚಿಕೆ, ಎಚ್ಚರಿಕೆ ಸಂದೇಶ, ಮತ್ತು ಪೊಲೀಸ್ ಪಡೆಗಳನ್ನು ಕಳುಹಿಸಿ ಗಲಭೆ ತಡೆಯಲು ಯತ್ನಿಸುತ್ತದೆ. ದೇಶದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಬರದಂತೆ ಕೋಮು ಸಾಮರಸ್ಯ ಕಾಪಾಡಲು ಕೇಂದ್ರ ಸರ್ಕಾರ ಸದಾ ಆದ್ಯತೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics