ಕಾಪ್ ಪಂಚಾಯತ್ (ಸಾಂಕೇತಿಕ ಚಿತ್ರ)
ಚಂಡೀಗಢ: ಸಂಪ್ರದಾಯದ ಹೆಸರಿನಲ್ಲಿ ಅಮಾನವೀಯ ಆದೇಶಗಳನ್ನು ನೀಡುವುದಕ್ಕೆ ಕಾಪ್ ಪಂಚಾಯತ್ ಗಳು ಪ್ರಸಿದ್ಧ. ಆದರೆ ಬದಲಾವಣೆ ಪ್ರಕೃತಿ ನಿಯಮ ಎಂಬ ತತ್ವವನ್ನು ಇಲ್ಲೊಂದು ಕಾಪ್ ಪಂಚಾಯತ್ ಅರ್ಥಮಾಡಿಕೊಂಡಂತಿತನ್ನ ಆದೇಶ ನೀಡುವ ವಿಧಾನದಲ್ಲೂ ಬದಲಾವಣೆ ಮಾಡಿಕೊಂಡಿದೆ.
ಚಂಡೀಗಢದ ಜಿಂದ್ ನಲ್ಲಿರುವ ಬುರ ಕಾಪ್ ಪಂಚಾಯತ್ ವರದಕ್ಷಿಣೆ ತೆಗೆದುಕೊಳ್ಳುವುದು, ಎರಡಕ್ಕಿಂತ ಮಕ್ಕಳನ್ನು ಹೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ವಿವಾಹ ಸಮಾರಂಭದಲ್ಲಿ ವಧುವಿನ ಕುಟುಂಬದಿಂದ ವರನ ಕುಟುಂಬದವರು 1 ರೂಪಾಯಿ ವರದಕ್ಷಿಣೆ ಪಡೆದುಕೊಳ್ಳಬೇಕು ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವಂತಿಲ್ಲ ಎಂದು ಕಾಪ್ ಪಂಚಾಯತ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ವಿವಾಹಕ್ಕೂ ಮುನ್ನ ನಡೆಯುವ ವರನ ಮೆರವಣಿಗೆ ವೇಳೆ 21 ಕ್ಕಿಂತ ಹೆಚ್ಚು ಜನರಿದ್ದರೆ ವಧುವಿನ ಕುಟುಂಬಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ ಅದ್ದರಿಂದ 21 ಜನಕ್ಕಿಂತ ಹೆಚ್ಚು ಜನರಿರಬಾರದು ಎಂದು ಕಾಪ್ ಪಂಚಾಯತ್ ಆದೇಶ ನೀಡಿದೆ. ಕಾಪ್ ಪಂಚಾಯತ್ ನ ಆದೇಶ ಪಾಲಿಸುವ ದಂಪತಿಗಳಿಗೆ ಸನ್ಮಾನ ಮಾಡುವುದಕ್ಕೂ ಕಾಪ್ ಪಂಚಾಯತ್ ನ ಸಭೆಯಲ್ಲಿ ತೀರ್ಮಾನಿಸಲಾಗಿದೆ.