ನವದೆಹಲಿ: ಸ್ವಚ್ಛ ಭಾರತ ಸೆಸ್ ಆರಂಭಿಸಿದ ಒಂದು ತಿಂಗಳಲ್ಲಿ ರು.329 ಕೋಟಿ ಸಂಗ್ರಹಿಸಿರುವುದಾಗಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ನವೆಂಬರ್ 15ರಿಂದ ಕೇಂದ್ರ ಸರ್ಕಾರ ಎಲ್ಲ ಸರಕು ಮತ್ತು ಸೇವೆಗಳ ಮೇಲೆ ಶೇ.0.5ರಷ್ಟು ಸೆಸ್ ಜಾರಿಗೆ ತಂದಿದೆ. ನವೆಂಬರ್‍ನಿಂದ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ರು.3,750 ಕೋಟಿ ಸೆಸ್ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಈ ಹಣವನ್ನು ರಾಜ್ಯ ಸರ್ಕಾರಗಳ ಸ್ವಚ್ಛ ಭಾರತ ನಿಧಿಗೆ ವರ್ಗಾಯಿಸಲಾಗುವುದು ಎಂದು ಸಿನ್ಹ ತಿಳಿಸಿದ್ದಾರೆ.