ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್
ನವದೆಹಲಿ: ಸದ್ಯದಲ್ಲೇ ಭಾರತವು ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಸಂಸತ್ ಭವನವನ್ನು ಹೊಂದಲಿದೆಯೇ? ಈಗಿರುವ 88 ವರ್ಷ ಹಳೆಯ ಸಂಸತ್ ಭವನವು ಶಿಥಿಲಗೊಳ್ಳುವ ಹಂತದಲ್ಲಿದ್ದು, ಸ್ಥಳಾವಕಾಶದ ಕೊರತೆಯೂ ಇರುವುದರಿಂದ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಹೊಸ ಸಂಸತ್‍ಭವನದ ಪ್ರಸ್ತಾಪವನ್ನು ಸಲ್ಲಿಸಿದ್ದಾರೆ.
ಈ ಕುರಿತು ಅವರು ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದು, ಹೊಸ ಸಂಸತ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಜತೆಗೆ, ಪರ್ಯಾಯ ಸ್ಥಳಕ್ಕೆ ಎರಡು ಆಯ್ಕೆಗಳನ್ನೂ ಅವರು ನೀಡಿದ್ದಾರೆ. ಒಂದೋ ಸಂಸತ್ ಸಂಕೀರ್ಣದ ಒಳಗೆ ಅಥವಾ ರಾಜ್ ಪಥ್‍ನ ಪ್ರದೇಶದಲ್ಲಿ ಹೊಸ ಸಂಸತ್ ನಿರ್ಮಿಸಬಹುದು ಎಂದಿದ್ದಾರೆ ಮಹಾಜನ್.
ಪತ್ರವನ್ನು ಪರಿಶೀಲಿಸಿದ ಬಳಿಕ ನಗರಾಭಿವೃದ್ಧಿ ಸಚಿವಾಲಯವು ಸಂಪುಟ ಟಿಪ್ಪಣಿಯನ್ನು ಸಿದ್ಧ ಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. 2026ರ ಬಳಿಕ ಲೋಕಸಭೆಯ ಆಸನಗಳ ಸಂಖ್ಯೆಗಳನ್ನು ಹೆಚ್ಚಿಸಬೇಕಾಗುತ್ತದೆ. ಕಟ್ಟಡವೂ ಶಿಥಿಲಗೊಂಡಿದೆ, ಚಟುವಟಿಕೆಗಳು, ಸಿಬ್ಬಂದಿ, ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ ಎಂದಿದ್ದಾರೆ ಸ್ಪೀಕರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics