ನವದೆಹಲಿ: ಇನ್ನು ಮುಂದೆ ಡಿಮ್ಯಾಟ್ ಖಾತೆ ತೆರೆಯಲು 3-5 ದಿನಗಳು ಕಾಯಬೇಕಾಗಿಲ್ಲ. ಆದಷ್ಟು ಬೇಗನೆ ನಿಮ್ಮ ಖಾತೆ ತೆರೆಯುವ ಕಾರ್ಯ ಪೂರ್ಣಗೊಳ್ಳಲಿದೆ.
ಖಾತೆ ತೆರೆಯುವ ಅವ್ಯಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವು ಸೆಬಿಗೆ ಕೋರಿಕೆ ಸಲ್ಲಿಸಿದೆ. ಇದಕ್ಕೆ ಸೆಬಿ ಒಪ್ಪಿದರೆ ಜನ ಸಾಮಾನ್ಯರು ಡಿಮ್ಯಾಟ್ ಖಾತೆ ತೆರೆಯಲು ಪರದಾಡಬೇಕಾದ ಪರಿಸ್ಥಿತಿ ಇರುವುದಿಲ್ಲ.ಸಾರ್ವಜನಿಕ ವಲಯದ ಸಂಸ್ಥೆಗಳ ಷೇರು ಮಾರಾಟದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕಾರ್ಯತಂತ್ರವೊಂದನ್ನು ಸಿದ್ಧಪಡಿಸಿದೆ.
ಅದೇನೆಂದರೆ, ಹೆಚ್ಚಿನ ಜನರನ್ನು ಡಿಮ್ಯಾಟ್ ಖಾತೆ ತೆರೆಯುವಂತೆ ಪ್ರೇರೇಪಿಸುವುದು. ಪಿಎಸ್‍ಯು ಷೇರುಗಳ ಖರೀದಿಯತ್ತ ಜನಸಾಮಾನ್ಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಇಂತಹ ಹೂಡಿಕೆದಾರರ ಕೋಟಾವನ್ನು ದುಪ್ಪಟ್ಟು(ಶೇ.20) ಮಾಡಲಾಗಿದೆ ಎಂದು ಹೂಡಿಕೆ ಹಿಂತೆಗೆತ ಇಲಾಖೆ ತಿಳಿಸಿದೆ.