ದೇಶ

ವೈಟ್‍ಹೌಸ್ ಆಡಳಿತ ವಿಭಾಗಕ್ಕೆ ಅಜಯ್

Srinivasamurthy VN

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಭಾರತೀಯರ ಬುದ್ಧಿ ಮತ್ತೆಯ ಮೇಲೆ ಹೆಚ್ಚಿನ ನಂಬಿಕೆ ಇರುವುದು ಮತ್ತೊಮ್ಮೆ ಸಾಬೀತಾಗಿದೆ.

ಆಡಳಿತ ವಿಭಾಗದ ಪ್ರಮುಖ ಹುದ್ದೆಗೆ ಭಾರತೀಯ ಮೂಲದ ಅಮೆರಿಕ ನಿವಾಸಿ ಅಜಯ್ ಬಂಗ ಅವರನ್ನು ನೇಮಿಸಿದ್ದಾರೆ. ಇವರು ಅಂತಾ ರಾಷ್ಟ್ರೀಯ ವ್ಯಾಪಾರ ವಿಷಯಕ್ಕೆ ಸಂಬಂಧಪಟ್ಟ ನೀತಿಗಳ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ. ಬಂಗಾ ಅವರು ಭಾರತ-ಅಮೆರಿಕ ವ್ಯಾಪಾರ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅವರನ್ನು ಇದೀಗ ವ್ಯಾಪಾರ ನೀತಿ ಮತ್ತು ಮಾತುಕತೆ'ಯ ಸಲಹಾ ಸಮಿತಿಗೆ ನೇಮಿಸಲಾಗಿದೆ. ಬಂಗ ಸೇರಿದಂತೆ ಹಲವರನ್ನು ಇನ್ನಿತರ ಪ್ರಮುಖ ಹುದ್ದೆಗಳಿಗೆ ಶ್ವೇತಭವನ ನೇಮಕ ಮಾಡಿಕೊಂಡಿದೆ.

SCROLL FOR NEXT