ದೇಶ

ಹಳಿ ಮೇಲೆ ಬಂಡೆಕಲ್ಲು ಬಿದ್ದಿದ್ದರಿಂದ ದುರಂತ: ಸುರೇಶ್ ಪ್ರಭು

Srinivasamurthy VN

ನವದೆಹಲಿ: ಆನೇಕಲ್ ಬಳಿ ಸಂಭವಿಸಿದ ರೈಲು ಹಳಿ ತಪ್ಪಿದ ಘಟನೆಗೆ ಹಳಿ ಮೇಲೆ ಬಂಡೆಕಲ್ಲು ಬಿದ್ದಿದ್ದೇ ಕಾರಣ ಎಂದು ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಹೇಳಿದ್ದಾರೆ.

ಬೆಳಗ್ಗೆ 6.25ಕ್ಕೆ ಹೊರಟಿದ್ದ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಬೆಂಗಳೂರು-ಹೊಸೂರು ಮಾರ್ಗ ಮಧ್ಯೆ ಆನೇಕಲ್ ಸಮೀಪದ ಬಿದರಗೆರೆ ಗ್ರಾಮದ ಬಳಿ ಹಳಿತಪ್ಪಿದ್ದು, ಸುಮಾರು 8 ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಸುಮಾರು 12 ಮಂದಿ ದುರ್ಮರಣಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.




ಇನ್ನು ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು, ಅನೇಕಲ್ ಬಳಿ ಸಂಭವಿಸಿದ ರೈಲು ದುರಂತ ಪ್ರಕರಣ ಸಂಬಂಧ ಖುದ್ದು ನಾನೇ ಮೇಲ್ವಿಚಾರಣೆ ನಡೆಸುತ್ತಿದ್ದೇನೆ. ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದೇನೆ. ಅಲ್ಲದೆ ರಕ್ಷಣಾ ಕಾರ್ಯದ ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದೇನೆ ಹೇಳಿದ್ದಾರೆ.




ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸುರೇಶ್ ಪ್ರಭು ಅವರು, ದುರ್ಘಟನೆಗೆ ಹಳಿ ಮೇಲೆ ಬಂಡೆಕಲ್ಲು ಬಿದ್ದಿದ್ದೇ ಕಾರಣ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

SCROLL FOR NEXT