ನವದೆಹಲಿ: ಟಾಲಿವುಡ್‌ನ ಅರಳುವ ಪ್ರತಿಭೆ ಕಿರುತೆರೆ ನಟಿ ದೀಪ್ತಿ (ರಾಮಲಕ್ಷ್ಮಿ) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ಫತೇಹ್‌ನಗರದಲ್ಲಿ ನಡೆದಿದೆ.
ಪಶ್ಚಿಮ ಗೋದಾವರಿಯ ಕಿರಿತೆರೆ ನಟಿಯಾಗಿದ್ದ ದೀಪ್ತಿ (30) ಹಲವು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಇಂದು ಬೆಳಿಗ್ಗೆ ಅವರಿದ್ದ ಫತೇಹ್‌ನಗರದ ಆಪಾರ್ಟ್‌ಮೆಂಟ್ ರೂಂನಲ್ಲಿ ಇದ್ದಕ್ಕಿದ್ದಂತೆ ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿದ ಪೊಲೀಸರಿಗೆ ಸ್ಥಳದಲ್ಲಿ ದೀಪ್ತಿಯವರ ಐಪಾಡ್ ದೊರಕಿದೆ. ಪರಿಶೀಲನೆ ನಡೆಸಿದಾಗ ಅದರಲ್ಲಿ ದೀಪ್ತಿ ನೇಣು ಹಾಕಿಕೊಳ್ಳುವ ಚಿತ್ರ ದೊರಕಿದೆ. ಆದರೆ ಆತ್ಮಹತ್ಯೆಯ ಕುರಿತಂತೆ ಈ ವರೆಗೂ ಕಾರಣ ತಿಳಿದುಬಂದಿಲ್ಲ. ನಟಿಯ ದೇಹವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.