ರಾಜೇಶ್ವರ್ ಸಿಂಗ್‌ 
ದೇಶ

'ಘರ್ ವಾಪಸಿ' ಸೃಷ್ಟಿಕರ್ತ ಮನೆಗೆ

ಮರು ಮತಾಂತರ ವಿಚಾರ ಸಂಸತ್ತಿನಲ್ಲಿ ಸೃಷ್ಟಿಸಿದ ಅವಾಂತರದ ಬಳಿಕ ಆರೆಸ್ಸೆಸ್ ಮತ್ತು ಬಿಜೆಪಿ ಎಚ್ಚೆತ್ತುಕೊಂಡಿದೆ...

ನವದೆಹಲಿ: ಮರು ಮತಾಂತರ ವಿಚಾರ ಸಂಸತ್ತಿನಲ್ಲಿ ಸೃಷ್ಟಿಸಿದ ಅವಾಂತರದ ಬಳಿಕ ಆರೆಸ್ಸೆಸ್  ಮತ್ತು ಬಿಜೆಪಿ ಎಚ್ಚೆತ್ತುಕೊಂಡಿದೆ. ಘರ್‌ವಾಪಸಿ ಕಾರ್ಯಕ್ರಮದ ಸೃಷ್ಟಿಕರ್ತ, ಆರೆಸ್ಸೆಸ್‌ನ ಪ್ರಮುಖ ನಾಯಕ ರಾಜೇಶ್ವರ್ ಸಿಂಗ್‌ರನ್ನು ಸದ್ಯದ ಮಟ್ಟಿಗೆ ಚಟುವಟಿಕೆಗಳಿಂದ ದೂರ ಇರುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಸಂಘ ಪರಿವಾರದ  ನಾಯಕರು ಮತ್ತು ಬಿಜೆಪಿ ವರಿಷ್ಠರ ಸಭೆಯಲ್ಲಿ ಬೆಳವಣಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಆಕ್ಷೇ ಪ ವ್ಯಕ್ತ ಪಡಿಸಿದ್ದರು. ಇಂಥ ಬೆಳವಣಿಗೆಗಳಿಂದ ಕೇಂದ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಪ್ರಬಲವಾಗಿ ಆಕ್ಷೇಪಿಸಿದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ 1996ರಿಂದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ  ಧರ್ಮ ಜಾಗರಣ ವೇದಿಕೆಯ ನೇತೃತ್ವ ವಹಿಸಿದ್ದ ರಾಜೇಶ್ವರ್ ಸಿಂಗ್‌ರನ್ನು ಸಂಘದ ಚಟುವಟಿಕೆಗಳಿಂದ ದೂರ ಇಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಿಂಗ್‌ರಿಂದಲೇ ಮಾಹಿತಿ: ಸಂಘದ ಚಟುವಟಿಕೆಗಳಿಂದ ದೂರ ಇಟ್ಟಿರುವ ವಿಚಾರವನ್ನು ಸಿಂಗ್ ಅವರೇ ಖಚಿತ ಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ಇದರಿಂದ ನನ್ನ ಆರೋಗ್ಯ ಏರುಪೇರಾಗಿದೆ. ಹೀಗಾಗಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಸಿಂಗ್ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟ ನೆ ನೀಡಿದ್ದಾರೆ. ಈ ಹಿಂದೆ ಆರೆಸ್ಸೆಸ್ ನ ಪ್ರಮುಖ ಮುಖಂಡರು ಸೇರಿ ಎಲ್ಲರೂ ತಮಗೆ ಬೆಂಬಲ ವ್ಯಕ್ತಪಡಿಸಿದ್ದರು.  ಆದರೆ, ಸಂಘ ಎಲ್ಲ ಕಾಲದಲ್ಲೂ ಬಲಿಷ್ಠವಾಗಿರುವುದಿಲ್ಲ. ಅವರಿಗೆ ಸದ್ಯ ನನ್ನ ಅಗತ್ಯ ಇಲ್ಲದೇ ಇರಬಹುದು. ಆದರೆ ಮುಂದೊಂದು ದಿನ ನನ್ನ ಅವಶ್ಯಕತೆ ಅವರಿಗೆ ಬೀಳಬಹುದು ಎಂದು ಹೇಳಿದ್ದಾರೆ ಸಿಂಗ್.

ಹಿಂದೂ ರಾಷ್ಟ್ರ ಆಗಲಿದೆ ಎಂದಿದ್ದ ಸಿಂಗ್!: ಹಲವು ವರ್ಷಗಳಿಂದ ಸಂಘದ ಪ್ರಚಾರಕನಾಗಿ ದುಡಿಯುತ್ತಿರುವ ರಾಜೇಶ್ವರ್ ಸಿಂಗ್ ಡಿ.31, 2021ರ ವೇಳೆಗೆ ಭಾರತವನ್ನು ಹಿಂದೂ ರಾಷ್ಟ್ರವಾಗಿ  ಪರಿವರ್ತಿಸುವ ಕನಸು ಕಂಡವರು. ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ತೀವ್ರ ಪ್ರಚಾರಾಂದೋಲನ ನಡೆಸಿದ್ದರು. 1996ರಿಂದಲೂ ಆರೆಸ್ಸೆಸ್‌ನ ಧರ್ಮ ಜಾಗರಣ ಆಂದೋಲನ ನೇತೃತ್ವವನ್ನೂ ಸಿಂಗ್ ವಹಿಸಿದ್ದರು. ಆದರೆ ಡಿ.8ರಂದು 100ಕ್ಕೂ ಹೆಚ್ಚು ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿದಾಗ ಸಿಂಗ್ ವಿವಾದಕ್ಕೆ ಗುರಿಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT